ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ತಾವಿಲ್ಲ ಮತ್ತು ಅದಕ್ಕಾಗಿ ಯಾವುದೇ ಲಾಬಿ ಮಾಡುತ್ತಿಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪಕ್ಷ ತಮಗೆ ಶಾಸಕ ಮತ್ತು ಮಂತ್ರಿ ಸೇರಿದಂತೆ ಎಲ್ಲಾ ಸ್ಥಾನಗಳನ್ನು ನೀಡಿದ್ದು, ಸದ್ಯಕ್ಕೆ ತಾವು ರಾಜ್ಯಾಧ್ಯಕ್ಷ ಸ್ಥಾನವನ್ನು ಕೇಳುತ್ತಿಲ್ಲ ಆದರೆ ಕೊಟ್ಟರೆ ಜವಾಬ್ದಾರಿ ನಿಭಾಯಿಸುವುದಾಗಿ ತಿಳಿಸಿದ್ದಾರೆ.
ಬಿ.ವೈ. ವಿಜಯೇಂದ್ರ ಅವರು ಒಳ್ಳೆಯ ಕೆಲಸ ಮತ್ತು ಹೋರಾಟಗಳನ್ನು ಮಾಡಿದ್ದು, ಅವರನ್ನೇ ಮುಂದುವರಿಸಿದರೂ ಸ್ವಾಗತಿಸುತ್ತೇನೆ ಮತ್ತು ಒಂದು ವೇಳೆ ಬದಲಾವಣೆಯಾಗಿ ಯಾರೇ ಅಧ್ಯಕ್ಷರಾದರೂ ಪಕ್ಷವನ್ನು ಬಲಪಡಿಸಿ ಎನ್ಡಿಎ ಅಧಿಕಾರಕ್ಕೆ ತರಲು ತನು ಮನ ಧನ ಹಾಕಿ ಪ್ರಯತ್ನಿಸುತ್ತೇವೆ ಎಂದಿದ್ದಾರೆ. ಇದೇ ವೇಳೆ ಪಕ್ಷದಲ್ಲಿ ಯಾವುದೇ ಅಡ್ಜಸ್ಟ್ಮೆಂಟ್ ರಾಜಕಾರಣ ಇಲ್ಲ ಎಂದಿರುವ ಅವರು, ಹಳದಿ ಕಣ್ಣಿಗೆ ಕಾಣುವುದೆಲ್ಲಾ ಹಳದಿ ಎಂದು ಕೆಲವರು ಹೇಳುತ್ತಾರೆ ಆದರೆ ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


















