ಬೆಂಗಳೂರು: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ವಿಶೇಷ ಅವಧಿಯ ಫಿಕ್ಸೆಡ್ ಡೆಪಾಸಿಟ್ (FD) ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಿ ಹೆಚ್ಚಿಸಿದೆ. ಬ್ಯಾಂಕಿನ ಜನಪ್ರಿಯ ‘ಬಿಒಬಿ ಗೋಲ್ಡನ್ ಗೋಲ್ ಡೆಪಾಸಿಟ್ ಸ್ಕೀಮ್’ (bob Golden Goal Deposit Scheme) ಅಡಿಯಲ್ಲಿ 555 ದಿನಗಳ ಅವಧಿಯ ಸ್ಥಿರ ನಿಧಿಯ ಬಡ್ಡಿ ದರವನ್ನು ಶೇ. 7.45ರವರೆಗೆ ಹೆಚ್ಚಿಸಿದೆ. ಈ ಮೂಲಕ ಮಧ್ಯಮ ಅವಧಿಯ ಹೂಡಿಕೆದಾರರಿಗೆ ಹೆಚ್ಚಿನ ಲಾಭ ದೊರೆಯಲಿದೆ.
ಹೊಸ ಬಡ್ಡಿ ದರಗಳ ವಿವರ
ಬ್ಯಾಂಕ್ ಆಫ್ ಬರೋಡಾದ ಈ 555 ದಿನಗಳ ವಿಶೇಷ ಎಫ್.ಡಿ ಯೋಜನೆಯಲ್ಲಿ ವಿವಿಧ ವರ್ಗದ ಗ್ರಾಹಕರಿಗೆ ಸಿಗುವ ಬಡ್ಡಿ ದರಗಳು ಹೀಗಿವೆ:
• ಸಾಮಾನ್ಯ ಗ್ರಾಹಕರಿಗೆ: ಶೇ. 6.85ರಷ್ಟು ಬಡ್ಡಿ ದೊರೆಯಲಿದೆ.
• ಹಿರಿಯ ನಾಗರಿಕರಿಗೆ: ಶೇ.7.35ರಷ್ಟು ಬಡ್ಡಿ ಸಿಗಲಿದೆ.
• ಅತಿ ಹಿರಿಯ ನಾಗರಿಕರಿಗೆ (Super Senior Citizens – 80 ವರ್ಷಕ್ಕಿಂತ ಮೇಲ್ಪಟ್ಟವರು): ಶೇ. 7.45ರವರೆಗೆ ಗರಿಷ್ಠ ಬಡ್ಡಿ ಲಾಭ ಪಡೆಯಬಹುದು.
5 ಲಕ್ಷ ಮತ್ತು 10 ಲಕ್ಷ ರೂ. ಹೂಡಿಕೆಗೆ ಅಂದಾಜು ರಿಟರ್ನ್ಸ್ ಎಷ್ಟು?
ತ್ರೈಮಾಸಿಕ ಬಡ್ಡಿ ಚಕ್ರಬಡ್ಡಿ ಲೆಕ್ಕಾಚಾರದ ಪ್ರಕಾರ, 555 ದಿನಗಳ ಅವಧಿಗೆ ಹೂಡಿಕೆ ಮಾಡುವ ಹಣಕ್ಕೆ ಸಿಗುವ ಒಟ್ಟು ಮೆಚ್ಯೂರಿಟಿ ಮೊತ್ತದ ಅಂದಾಜು ಲೆಕ್ಕಾಚಾರ ಹಾಕೋಣ. ಸಾಮಾನ್ಯ ಗ್ರಾಹಕರು 10 ಲಕ್ಷ ರೂ. ಹೂಡಿಕೆ ಮಾಡಿದರೆ ಅಂದಾಜು 1.09 ಲಕ್ಷ ರೂ. ಬಡ್ಡಿ ಗಳಿಸಬಹುದು.
ಅದೇ ಹಿರಿಯ ನಾಗರಿಕರು ಸುಮಾರು 1.17 ಲಕ್ಷ ರೂ. ಹಾಗೂ ಅತಿ ಹಿರಿಯ ನಾಗರಿಕರು ಸುಮಾರು 1.19 ಲಕ್ಷ ರೂ.ವರೆಗೆ ಲಾಭ ಪಡೆಯಲಿದ್ದಾರೆಗ್ರಾಹಕರು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ಮೊಬೈಲ್ ಆ್ಯಪ್ ‘ಬಿಒಬಿ ವರ್ಲ್ಡ್’ (bob World), ನೆಟ್ ಬ್ಯಾಂಕಿಂಗ್ ಅಥವಾ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ವಿಶೇಷ ಎಫ್.ಡಿ ಖಾತೆಯನ್ನು ತೆರೆಯಬಹುದು. ಹೊಸ ಗ್ರಾಹಕರು ಉಳಿತಾಯ ಖಾತೆ ಇಲ್ಲದೆಯೂ ಆನ್ ಲೈನ್ ಮೂಲಕ ನೇರವಾಗಿ ಎಫ್.ಡಿ ಖಾತೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಸುರಕ್ಷಿತ ಹಾಗೂ ಖಚಿತವಾದ ಆದಾಯ ಬಯಸುವ ಹೂಡಿಕೆದಾರರಿಗೆ ಇದು ಉತ್ತಮ ಅವಕಾಶವಾಗಿದೆ.



















