ತುಮಕೂರಿನ ಶಿವಕುಮಾರ್ ಸ್ವಾಮೀಜಿ ವೃತ್ತದಲ್ಲಿ ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಸನ್ನಿ ಎಂಬ ಯುವಕನ ಕಳ್ಳಾಟ ಬಯಲಾಗಿದೆ. ಕೈನಲ್ಲಿ ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಡ್ರಾಮಾ ಮಾಡುತ್ತಿದ್ದ ಈ ನಕಲಿ ಭಿಕ್ಷುಕ, ಸ್ಟಿಕ್ ತೆಗೆದಾಗ ಅರಾಮಾಗಿ ನಡೆದಿದ್ದಾನೆ.
ಇದನ್ನು ಗಮನಿಸಿದ ಸಾರ್ವಜನಿಕರು ಆತನ ಕಳ್ಳಾಟಕ್ಕೆ ರೋಸಿಹೋಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕನಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿ, ಕೊನೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.


















