ರಾಜಾಜಿನಗರ ತ್ಯಾಜ್ಯ ವಿಲೇವಾರಿ ಘಟಕದ ಬಳಿ ನಡೆದ ಏಳು ಜನರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆಡಿಯೋ ಲಭ್ಯವಾಗಿದೆ. ಪ್ರಕರಣದಲ್ಲಿ ಬದುಕುಳಿದಿರುವ ಬಾಲಕ ಯತೀನ್ ಹಾಗೂ ಆತನ ಸಂಬಂಧಿಕರ ನಡುವೆ ನಡೆದಿದ್ದ ಫೋನ್ ಸಂಭಾಷಣೆ ವೈರಲ್ ಆಗಿದೆ.
ಕುಟುಂಬಸ್ಥರು ಆತಂಕಗೊಂಡು ಅಪ್ಪ-ಅಮ್ಮ ಎಲ್ಲಿ ಎಂದು ಕೇಳಿದಾಗ, ಆರೋಪಿ ಇಂದುಶೇಖರ್ ಬಾಲಕನಿಗೆ ಸುಳ್ಳು ಕಥೆ ಹೇಳಿಕೊಟ್ಟು ಮಾತನಾಡಿಸಿದ್ದಾನೆ. “ನಾವು ಟ್ರಿಪ್ಗೆ ಬಂದಿದ್ದೇವೆ, ಬಸ್ನಲ್ಲಿದ್ದೇವೆ, ಟ್ರಿಪ್ ಮುಗಿಸಿ ಬರಲು ಮೂರು ತಿಂಗಳಾಗುತ್ತದೆ” ಎಂದು ಯತೀನ್ ಮೂಲಕ ಹೇಳಿಸಿದ್ದಾನೆ. ಕೊಲೆಯಾಗಿದ್ದ ಪುನೀತ್ ಬಗ್ಗೆ ಕೇಳಿದಾಗಲೂ ಎಲ್ಲರೂ ಬಸ್ನಲ್ಲಿದ್ದಾರೆ ಎಂದೇ ಉತ್ತರಿಸುವಂತೆ ಮಾಡಿದ್ದನು. ಸದ್ಯ ಈ ಆಡಿಯೋಗಳನ್ನು ಪಡೆದಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
















