ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್, ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆಯಾಗಿದೆ. ತಮ್ಮ ವೈಯಕ್ತಿಕ ಬದುಕು, ಕುಟುಂಬ ಮತ್ತು ರಾಜಕೀಯ ವಿಚಾರಗಳನ್ನು ಈ ಪುಸ್ತಕದಲ್ಲಿ ಅವರು ಬಿಚ್ಚಿಟ್ಟಿದ್ದಾರೆ.
ರಾಜೀವ್ ಗಾಂಧಿ ಜೊತೆಗಿನ ಪ್ರೀತಿ, ನೋವುಗಳು ಹಾಗೂ ಕೇಂಬ್ರಿಡ್ಜ್ನಲ್ಲಿ ಅವರೊಂದಿಗಿನ ಮೊದಲ ನೋಟದ ಪ್ರೀತಿಯ ಬಗ್ಗೆಯೂ ಬರೆದಿದ್ದಾರೆ. ಇಟಲಿಯಿಂದ ಭಾರತದವರೆಗಿನ ತಮ್ಮ ಜರ್ನಿ, ಇಂದಿರಾಗಾಂಧಿ ಅವರ ಕೋಪ-ತಾಪ ಮತ್ತು ಒಡನಾಟದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ಹುದ್ದೆ ನಿರಾಕರಿಸಿರುವ ಹಿಂದಿನ ಕಥೆ, ರಾಜಕೀಯ ಜೀವನದಲ್ಲಿ ಕಂಡ ಏಳು-ಬೀಳುಗಳು ಹಾಗೂ ಆರೋಪಗಳ ಬಗ್ಗೆಯೂ ವಿವರಿಸಿದ್ದಾರೆ. ಅಲ್ಲದೆ, ಸಿಖ್ ದಂಗೆ ಬಗ್ಗೆಯೂ ಉಲ್ಲೇಖಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪ್ರಸ್ತಾಪಿಸಿ, “ನರೇಂದ್ರ ಮೋದಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.



















