ಟಾಲಿವುಡ್ ಸ್ಟಾರ್ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮತ್ತು ಅನ್ನಾ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಪವನ್ ಕಲ್ಯಾಣ್ ಅವರು ತಮ್ಮ 3ನೇ ಪತ್ನಿ ಅನ್ನಾ ಅವರಿಂದಲೂ ದೂರವಾಗಿದ್ದಾರೆ. ಡಿಸಿಎಂ ಪವನ್ ಕಲ್ಯಾಣ್ ಈಗಾಗಲೇ ಅನ್ನಾಗೆ ವಿಚ್ಛೇದನ ನೀಡಿದ್ದಾರೆ. ಕಳೆದ 2013ರಲ್ಲಿ ರಷ್ಯಾದ ಮೂಲದ ಅನ್ನಾ ಜೊತೆ ಪವನ್ ಕಲ್ಯಾಣ್ ಮದುವೆಯಾಗಿತ್ತು. ಪವನ್ ಪತ್ನಿ ಅನ್ನಾಗೆ ಓರ್ವ ಮಗ ಮತ್ತು ಮಗಳು ಇದ್ದಾರೆ.
ಪವನ್ ಕಲ್ಯಾಣ್ ಅವರು ತಮ್ಮ ಮೊದಲ ಪತ್ನಿ ನಂದಿನಿಗೆ 1999ರಲ್ಲಿ ವಿಚ್ಛೇದನ ನೀಡಿದ್ದರು. 2ನೇ ಪತ್ನಿ ರೇಣು ದೇಸಾಯಿಗೆ 2012ರಲ್ಲಿ ಡಿವೋರ್ಸ್ ಕೊಟ್ಟಿದ್ದರು. ಈಗ ದಾಂಪತ್ಯದಿಂದ ದೂರವಾಗುತ್ತಿರುವ ಬಗ್ಗೆ ಇಬ್ಬರಿಂದಲೂ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಪರಸ್ಪರ ತಿಳುವಳಿಕೆ ಮತ್ತು ಗೌರವದೊಂದಿಗೆ ಬೇರ್ಪಡಲು ದಂಪತಿ ನಿರ್ಧಾರ ಮಾಡಿದ್ದಾರೆ. ವೈವಾಹಿಕ ಜೀವನ ಅಂತ್ಯಗೊಂಡರೂ ತಾವು ಉತ್ತಮ ಸ್ನೇಹಿತರಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ನಮ್ಮ ಮಕ್ಕಳಿಗೆ ಜವಾಬ್ದಾರಿಯುತ ಪೋಷಕರಾಗಿರುತ್ತೇವೆ ಎಂದು ಇಬ್ಬರೂ ಹೇಳಿದ್ದಾರೆ. ಮಕ್ಕಳ ಸಂತೋಷ ಮತ್ತು ಯೋಗಕ್ಷೇಮವೇ ನಮಗೆ ಮೊದಲ ಆದ್ಯತೆಯಾಗಿದೆ ಎಂದಿದ್ದಾರೆ. ಇದೇ ವೇಳೆ ನಮ್ಮ ಖಾಸಗಿತನಕ್ಕೆ ಎಲ್ಲರೂ ಗೌರವ ನೀಡಬೇಕೆಂದು ದಂಪತಿ ಮನವಿ ಮಾಡಿದ್ದಾರೆ.


















