ಸದಾ ವಿವಾದಾತ್ಮಕ ಹೇಳಿಕೆ ನೀಡುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಉಲ್ಟಾ ಹೊಡೆದಿದ್ದಾರೆ. ಅಂದು ರಾಕಿಂಗ್ ಸ್ಟಾರ್ ಯಶ್ ಅವರನ್ನು ತೆಗಳಿದ್ದ ಆರ್ಜಿವಿ, ಇಂದು ಅದೇ ಯಶ್ ಅವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ‘ರಾಮಾಯಣ’ ಸಿನಿಮಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಆರ್ಜಿವಿ, ಚಿತ್ರಕ್ಕೆ ಬಿಗ್ ಸೆಲ್ಯೂಟ್ ಹೊಡೆದಿದ್ದಾರೆ.
ಯಶ್ ಅವರ ಈ ಹೊಸ ಪ್ರಯತ್ನವನ್ನು ಆರ್ಜಿವಿ ಕೊಂಡಾಡಿದ್ದಾರೆ. ರಾವಣನಾಗಿ ಯಶ್ ನಟನೆ ನೋಡಿ ಆರ್.ಜಿ.ವಿ ಶಾಕ್ ಆಗಿದ್ದು, ಯಶ್ ತಮ್ಮ ಪಾತ್ರವನ್ನೇ ಕೊಂದಿದ್ದಾರೆ ಎಂದಿದ್ದಾರೆ. ಇಷ್ಟೇ ಅಲ್ಲದೆ, ಈ ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತಾಡುವವರನ್ನು ಆರ್ಜಿವಿ ‘ಬೊಗಳೋ ನಾಯಿಗಳು’ ಎಂದು ಕರೆದಿದ್ದಾರೆ. ಈ ಖಾರವಾದ ಪೋಸ್ಟ್ನಿಂದಾಗಿ ಸದ್ಯ ಆರ್ಜಿವಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಆಗ್ತಿದ್ದಾರೆ.


















ನಿರ್ದೇಶಕ ಆರ್ಜಿವಿ ಮಾತು ಮತ್ತೆ ಉಲ್ಟಾ