ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್ಪಟೇಲ್ ಸಾಥ್ ನೀಡಿದ್ದಾರೆ.
ಡಿಸಿ ಮತ್ತು ಎಸ್ಪಿ ಎಡವಟ್ಟಿನಿಂದ ಸಿದ್ದರಾಮಯ್ಯ ಕಾರು ಟ್ರಾಫಿಕ್ನಲ್ಲಿ ಸಿಲುಕಿತ್ತು. ಬಳಿಕ ಕಾರು ದೇವಾಲಯದ ಬಳಿ ತಲುಪಿತು. ಈ ಗೊಂದಲ ಕಂಡು ಸಚಿವ ಶಿವಲಿಂಗೇಗೌಡರು ಅಧಿಕಾರಿಗಳ ಮೇಲೆ ಸಿಟ್ಟಾದರು.
ದರ್ಶನದ ಬಳಿಕ ಫಲ ಪುಷ್ಪ ಪ್ರದರ್ಶನವನ್ನು ಅವರು ಉದ್ಘಾಟಿಸಿದರು. ನಾಡ ಕುಸ್ತಿ ಫೈನಲ್ ಪಂದ್ಯಕ್ಕೆ ಚಾಲನೆ ನೀಡಿ ವೀಕ್ಷಿಸಿದರು. ಈ ವೇಳೆ ನಾನು ನಾಸ್ತಿಕನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
















