ಶಾಲಾ ಶಿಕ್ಷಣ ಮತ್ತು ಕೋಚಿಂಗ್ ತರಗತಿಗಳ ಒತ್ತಡದಿಂದ ಮಕ್ಕಳನ್ನು ಮುಕ್ತಗೊಳಿಸಲು ಕರ್ನಾಟಕ ಸರ್ಕಾರ ಖಾಸಗಿ ಕೋಚಿಂಗ್ ಸೆಂಟರ್ಗಳ ನಿಯಂತ್ರಣಕ್ಕೆ ಮುಂದಾಗಿದೆ. ಸರ್ಕಾರವು ಅಕ್ಟೋಬರ್ 28ರಂದು ‘ಕರ್ನಾಟಕ ಟ್ಯುಟೋರಿಯಲ್ ಸಂಸ್ಥೆಗಳು ಅಥವಾ ಕೋಚಿಂಗ್ ಸೆಂಟರ್ಗಳ ನೋಂದಣಿ ಮತ್ತು ನಿಯಂತ್ರಣ ನಿಯಮಗಳು–2026’ರ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.
ಹೊಸ ಪ್ರಸ್ತಾವನೆಯ ಪ್ರಕಾರ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೋಚಿಂಗ್ಗೆ ಸೇರಿಸಿಕೊಳ್ಳುವಂತಿಲ್ಲ, ದಿನಕ್ಕೆ ಗರಿಷ್ಠ ಐದು ಗಂಟೆಗಳಷ್ಟೇ ತರಗತಿ ನಡೆಸಬೇಕು ಹಾಗೂ ಶುಲ್ಕ ಪಾವತಿ ಮತ್ತು ಮರುಪಾವತಿಗೆ ಸ್ಪಷ್ಟ ನಿಯಮ ಇರಬೇಕಾಗುತ್ತದೆ. ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಪೋಷಕರ ಹಣಕಾಸಿನ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಈ ಕರಡು ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರ ಆಕ್ಷೇಪಣೆ ಮತ್ತು ಸಲಹೆಗಳನ್ನು ಸ್ವೀಕರಿಸಿದ ಬಳಿಕ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.


















