ಅಮೆರಿಕದಲ್ಲಿ 470 ಸಂಸತ್ ಸ್ಥಾನಗಳಿಗೆ ಮಹತ್ವದ ಮಧ್ಯಂತರ ಚುನಾವಣೆ ನಡೆಯುತ್ತಿದ್ದು, ಡೊನಾಲ್ಡ್ ಟ್ರಂಪ್ ಹಾಗೂ ರಿಪಬ್ಲಿಕ್ ಪಕ್ಷಕ್ಕೆ ಸೋಲಿನ ಭೀತಿ ಎದುರಾಗಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ 435 ಸ್ಥಾನ, ಸೆನೆಟ್ನ 35 ಸ್ಥಾನ ಹಾಗೂ 36 ಗವರ್ನರ್ ಹುದ್ದೆಗಳಿಗೆ ಮತದಾನ ನಡೆಯುತ್ತಿದ್ದು, ಈಗಾಗಲೇ 10 ರಾಜ್ಯಗಳಲ್ಲಿ ಫೋಲಿಂಗ್ ಮುಕ್ತಾಯಗೊಂಡಿದೆ.
ಅಮೆರಿಕದಲ್ಲಿ ಟ್ರಂಪ್ ಜನಪ್ರಿಯತೆ ಕುಸಿಯುತ್ತಿದ್ದು, ಆರ್ಥಿಕ ಮುಗ್ಗಟ್ಟು, ಯುದ್ಧದ ವಾತಾವರಣ ಮತ್ತು ಇಂಧನ ಬೆಲೆ ಏರಿಕೆ ಈ ಚುನಾವಣೆಯ ಮೇಲೆ ನೇರ ಎಫೆಕ್ಟ್ ಬೀರಿದೆ. ಈ ಚುನಾವಣಾ ಫಲಿತಾಂಶ ರಿಪಬ್ಲಿಕ್ ಹಾಗೂ ಡೆಮಾಕ್ರಟಿಕ್ ಪಕ್ಷಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.



















