ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ SIR ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ಎಂಎಲ್‌ಸಿ ಸಿ.ಟಿ.ರವಿ ಸವಾಲು ಎಸೆದಿದ್ದಾರೆ. ರಾಜ್ಯದಲ್ಲಿ 99 ಲಕ್ಷ ಜನರ ಎಎಸ್ಎಸ್ ಡಿ ಇದ್ದು, ಮತ ಡಿಲೀಟ್ ಆಗಿದೆ ಎಂದು ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಹೇಳುತ್ತಿರುವ ಕಾಂಗ್ರೆಸ್, 9 ಲಕ್ಷ ಜನರಿಂದ ‘ನನ್ನ ಮತ ಅಕ್ರಮವಾಗಿ ಶಿಫ್ಟ್ ಆಗಿದೆ, ಡೂಪ್ಲಿಕೇಟ್ ಇಲ್ಲ’ ಎಂದು ಅರ್ಜಿ ಕೊಡಿಸಲಿ ಎಂದಿದ್ದಾರೆ.
10% ಅರ್ಜಿ ಕೊಡಿಸಿದರೆ ನೀಡುವ ಶಿಕ್ಷೆ ಅನುಭವಿಸಲು ಸಿದ್ಧ, ಇಲ್ಲವಾದಲ್ಲಿ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ದೇಶದ ಜನರ ಕ್ಷಮೆ ಕೇಳಿ ಎಂದು ಚಾಲೆಂಜ್ ಮಾಡಿದ್ದಾರೆ. ಮತ ಡಿಲೀಟ್ ಮಾಡಿರುವ ಅಧಿಕಾರಿಗಳೆಲ್ಲರೂ ರಾಜ್ಯ ಸರ್ಕಾರದವರೇ ಹೊರತು ಕೇಂದ್ರ ಸರ್ಕಾರ ಅಥವಾ ಚುನಾವಣಾ ಆಯೋಗವಲ್ಲ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡುವುದು ಅಪರಾಧ ಎಂದು ರವಿ ಕಿಡಿಕಾರಿದ್ದಾರೆ.


















