‘ಧನ್ವೀರ್ VS ವಿಜಯಲಕ್ಷ್ಮಿ’ ವಿವಾದದ ನಡುವೆ ನಟ ಅಭಿಷೇಕ್ ಅಂಬರೀಶ್ ಎಂಟ್ರಿ ಕೊಟ್ಟಿದ್ದು, ಅವರ ಹೇಳಿಕೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡಿದ ಅಭಿಷೇಕ್, “ರಾಜ್ಯಕ್ಕೆ ಒಂದಷ್ಟು ವಿಚಾರ ಈಗ ಗೊತ್ತಾಗಿದೆ. ಸತ್ಯ ಹೊರಬರಲು ಸಮಯ ಬೇಕು. ಸುಳ್ಳನ್ನು ಬೇಗ ಅರಗಿಸಿಕೊಳ್ಳಬಹುದು, ಆದರೆ ಸತ್ಯಕ್ಕೆ ತಾಳ್ಮೆ ಬೇಕು, ಸತ್ಯ ತಿಳಿಯುವ ಕಾಲಕ್ಕಾಗಿ ಕಾಯಬೇಕು” ಎಂದಿದ್ದಾರೆ.
ಅಲ್ಲದೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಈ ಮಾತಿನ ಬೆನ್ನಲ್ಲೇ ಅಭಿಷೇಕ್ ಅವರು ಧನ್ವೀರ್ ಪರ ನಿಂತಿದ್ದಾರಾ ಅಥವಾ ವಿಜಯಲಕ್ಷ್ಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರಾ ಎಂಬ ಪ್ರಶ್ನೆ ಮೂಡಿದ್ದು, ಅವರ ಈ ಹೇಳಿಕೆಯ ಹಿಂದಿನ ಅರ್ಥವೇನು ಎಂಬ ಚರ್ಚೆ ಶುರುವಾಗಿದೆ.

















