ಮಂಡ್ಯದ ಬಸರಾಳು ಕನ್ನಡ ಉತ್ಸವದಲ್ಲಿ ಅಭಿಮಾನಿಗಳು ‘ಜೈ ಡಿ ಬಾಸ್’ ಎಂದು ಜೈಕಾರ ಕೂಗಿದ್ದಕ್ಕೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನೀವು ಹೀಗೆ ಕೂಗಿದ್ದಕ್ಕೆ ಜೈಲಿಗೆ ಹೋಗಿದ್ದು” ಹಾಗೂ “ಯಾವುದೋ ಡಿ ಬಾಸ್ ಮುಚ್ಚೋ ಬಾಯಿ” ಎಂದು ವೇದಿಕೆಯಲ್ಲೇ ಅಭಿಮಾನಿಗಳಿಗೆ ಬೈದು ಗರಂ ಆಗಿದ್ದಾರೆ. ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಕೂಡ ದರ್ಶನ್ ಅಭಿಮಾನಿಗಳ ಮೇಲೆ ಆಕ್ರೋಶ ಹೊರಹಾಕಿದ್ದರು, ಇದೀಗ ರವಿಕುಮಾರ್ ಗಣಿಗ ಅವರು ರೊಚ್ಚಿಗೆದ್ದಿದ್ದಾರೆ.


















