ಸೌದಿ ಅರೇಬಿಯಾದ ಮದೀನಾ, ಜೆದ್ದಾ, ಮೆಕ್ಕಾದಲ್ಲಿ 4 ಸಾವಿರ ಭಾರತೀಯರು ಸಿಲುಕಿದ್ದಾರೆ. ಎರಡ್ಮೂರು ವಾರಗಳಿಂದ ದೇಶಕ್ಕೆ ಮರಳಲಾಗದೆ ಯಾತ್ರಾರ್ಥಿಗಳು ಪರದಾಡುತ್ತಿದ್ದಾರೆ. ಈ ಪೈಕಿ ರಾಜ್ಯದ 600 ಯಾತ್ರಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ.
ಮೆಕ್ಕಾ, ಮದೀನಾದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸುವಂತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಸಿಎಂ ಪತ್ರ ಬರೆದಿದ್ದಾರೆ. ಕನ್ನಡಿಗರನ್ನು ಸುರಕ್ಷಿತವಾಗಿ ಮರಳಿ ಕರೆತರುವಂತೆ ಪತ್ರದ ಮೂಲಕ ಡಿಕೆಶಿ ಕೂಡ ಮನವಿ ಮಾಡಿದ್ದಾರೆ.


















