ಬೆಂಗಳೂರು: ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿದ್ದೀರಾ? ಅದರಲ್ಲೂ, ಬೆಂಗಳೂರಿನಲ್ಲೇ ವೃತ್ತಿಜೀವನ ಆರಂಭಿಸಬೇಕು ಎಂಬ ಬಯಕೆ ಇದೆಯೇ? ಹಾಗಾದರೆ, ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ರೈಲ್ವೆ ಇಲಾಖೆಯ ಘಟಕವಾಗಿರುವ ರೈಲ್ ವ್ಹೀಲ್ ಫ್ಯಾಕ್ಟರಿಯಲ್ಲಿ (Rail Wheel Factory Recruitment 2026) ಖಾಲಿ ಇರುವ 3 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ಹುದ್ದೆಯ ಹೆಸರು: ರೈಲ್ ವ್ಹೀಲ್ ಫ್ಯಾಕ್ಟರಿ
ಹುದ್ದೆಗಳ ಸಂಖ್ಯೆ: 3
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 6
ಅರ್ಜಿ ಸಲ್ಲಿಕೆ ವಿಧಾನ: ಆಫ್ ಲೈನ್
ನಿವೃತ್ತ ನೌಕರರು, ಡಿಪ್ಲೋಮಾ ಮುಗಿಸಿದವರಿಗೆ ಇದು ಒಳ್ಳೆಯ ಅವಕಾಶವಾಗಿದೆ. ಬೆಂಗಳೂರಿನ ಯಲಹಂಕದಲ್ಲಿ ರೈಲ್ ವ್ಹೀಲ್ ಫ್ಯಾಕ್ಟರಿ ಘಟಕವಿದೆ. ಇಲ್ಲಿ 3 ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಸಾಮರ್ಥ್ಯ ಮೌಲ್ಯಮಾಪನ, ಕಾರ್ಯಾಚರಣೆಯ ಅಗತ್ಯತೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 65 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ www.rwf.indianrailways.gov.in. ಗೆ ಭೇಟಿ ನೀಡಬೇಕು. ನಿಮಗೆ ಬೇಕಾದ ಹುದ್ದೆಯ ಅಧಿಸೂಚನೆ ಓದಿಕೊಳ್ಳಬೇಕು. ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ The Senior Personnel Officer, Personnel Department, Rail Wheel Factory, Yelahanka, Bangalore -560 064 ವಿಳಾಸಕ್ಕೆ ಪೋಸ್ಟ್ ಮಾಡಬೇಕು.



















