ಮೈಸೂರು:ತಂದೆಯ ಹೆಸರು ಕೆಡಿಸಲು, ತೇಜೋವಧೆ ಮಾಡಿ ಲೆಗಸಿ ಹಾಳು ಮಾಡಲು ಹಾಗೂ ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದಲೇ ಸ್ಟಿಂಗ್ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ಮೈಸೂರಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ. 40 ವರ್ಷಗಳ ಕಾಲ ಯಾವುದೇ ಕಳಂಕವಿಲ್ಲದೆ ರಾಜಕಾರಣ ಮಾಡಿರುವ ತಮ್ಮ ತಂದೆ ಈ ವಿಚಾರವಾಗಿ ಬೇಸರಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪುತ್ತೂರು ಟಿಕೆಟ್ಗಾಗಿ ಓರ್ವ ಮಹಿಳೆ ಈ ಪ್ರಕರಣದಲ್ಲಿದ್ದು, ಆ ಮಹಿಳೆಯೂ ಸೇರಿದಂತೆ ನಮ್ಮ ಪಕ್ಷದವರೇ ಈ ಸ್ಟಿಂಗ್ ಪ್ರಕರಣದ ಹಿಂದೆ ಇದ್ದಾರೆ. ಸ್ಟಿಂಗ್ ಮಾಡಿ ಟಿಕೆಟ್ಗಾಗಿ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಿರುವ ಯತೀಂದ್ರ, ಸತ್ಯ ನಮ್ಮ ಕಡೆ ಇದೆ ಮತ್ತು ಖಂಡಿತವಾಗಿಯೂ ಸತ್ಯ ಹೊರಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

















