ಹಾವೇರಿ:ಬಿಜೆಪಿಗೆ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆ.ಎಸ್. ಈಶ್ವರಪ್ಪ ಅವರ ಮರುಪ್ರವೇಶದ ಕುರಿತು ಹಾವೇರಿ ಜಿಲ್ಲೆಯಲ್ಲಿ ಬೊಮ್ಮಾಯಿ ಸುಳಿವು ನೀಡಿದ್ದಾರೆ. ರಾಜಕಾರಣ ನಿಂತ ನೀರಲ್ಲ, ಚುನಾವಣೆಗೆ ಇನ್ನು ಒಂದೂವರೆ ವರ್ಷ ಬಾಕಿಯಿದೆ ಎಂದ ಅವರು, ಈ ಸರ್ಕಾರವನ್ನು ಕಿತ್ತೊಗೆಯಲು ನೀವೆಲ್ಲರೂ ಒಂದಾಗಬೇಕು ಎನ್ನುವುದು ಸಾರ್ವಜನಿಕರ ಮತ್ತು ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಜನರ ಒತ್ತಡಕ್ಕೆ ಹೊಂದಿಕೊಳ್ಳಬೇಕು ಅನ್ನೋ ಭಾವನೆ ನಮ್ಮಲ್ಲೂ ಮೂಡಿದ್ದು, ಶೀಘ್ರದಲ್ಲೇ ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

















