ಚಿಕ್ಕಮಗಳೂರು ತಾಲೂಕಿನ ಆಲ್ದೂರು, ಕಣತಿ, ಶಂಕರ್ ಫಾಲ್ಸ್ ಹಾಗೂ ಬನ್ನೂರು ಸುತ್ತಮುತ್ತ ಇಂದೂ ಕೂಡ ಧಾರಾಕಾರ ಮಳೆ ಮುಂದುವರಿದಿದೆ. ಕಳೆದ ಕೆಲವು ತಿಂಗಳಿಂದ ತೀವ್ರ ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಮಲೆನಾಡಿನ ಜನತೆಗೆ ಈ ಮಳೆ ತಂಪೆರೆದಿದೆ. ನಿನ್ನೆಯಿಂದ ಇಡೀ ಭಾಗದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಮಲೆನಾಡು ವ್ಯಾಪ್ತಿಯಲ್ಲಿ ವಾತಾವರಣ ಸಂಪೂರ್ಣ ತಂಪಾಗಿದೆ.


















