ಬೆಂಗಳೂರು:ಖಾಸಗಿ ಆಸ್ಪತ್ರೆಗಳಲ್ಲಿ ಏಕರೂಪ ದರ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ಅಸೋಸಿಯೇಷನ್ ಮುಖ್ಯಸ್ಥರ ಜೊತೆ ನಿನ್ನೆ ನಡೆದ ಮಹತ್ತರವಾದ ಸಭೆಯಲ್ಲಿ ಈ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.
ಆಸ್ಪತ್ರೆಗಳಲ್ಲಿ ಜನರಿಗೆ ಸುಲಭವಾಗಿ ಕಾಣುವ ರೀತಿಯಲ್ಲಿ ಹಾಗೂ ಪ್ರತ್ಯೇಕ ಬಣ್ಣಗಳಲ್ಲಿ ಪ್ರಮುಖ ಚಿಕಿತ್ಸೆಗಳ ದರ ಪಟ್ಟಿಯನ್ನು ಪ್ರದರ್ಶಿಸಬೇಕು ಎಂದು ಈಗಾಗಲೇ ಆದೇಶಿಸಲಾಗಿದೆ. ಆಸ್ಪತ್ರೆಗಳಲ್ಲಿ ಒಟ್ಟು 4,000 ಕ್ಕಿಂತ ಹೆಚ್ಚು ಚಿಕಿತ್ಸೆಗಳಿದ್ದು, ಉಳಿದ ಎಲ್ಲಾ ಚಿಕಿತ್ಸೆಗಳ ವಿವರವಾದ ದರ ಪಟ್ಟಿಯನ್ನು ರಿಸೆಪ್ಷನ್ಗಳಲ್ಲಿ ಕಡ್ಡಾಯವಾಗಿ ಅಳವಡಿಸುವಂತೆ ಸಭೆಯಲ್ಲಿ ಸೂಚಿಸಲಾಗಿದೆ.


















