ಬೆಟ್ಟಿಂಗ್ ಆಪ್ ನಡೆಸುತ್ತಿದ್ದ ಹಾಗೂ ಹವಾಲಾ ದಂಧೆಯಲ್ಲಿ ತೊಡಗಿದ್ದ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ಭರ್ಜರಿ ದಾಳಿ ನಡೆಸಿದೆ. ದೆಹಲಿ ಯ ಇಡಿ ಅಧಿಕಾರಿಗಳ ತಂಡವು ರಾಜಧಾನಿ ಬೆಂಗಳೂರಿನ ಮೂರು ಪ್ರಮುಖ ಸ್ಥಳಗಳಲ್ಲಿ ಈ ದಾಳಿ ಸಂಘಟಿಸಿದೆ.
ದಾಳಿ ನಡೆಸಿರುವ ಅಧಿಕಾರಿಗಳು ಹವಾಲಾ ದಂಧೆ ನಡೆಸುತ್ತಿದ್ದ ಬೆಟ್ಟಿಂಗ್ ಆಪ್ ಕಂಪನಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
















