ರಾಮನಗರ:ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಮನಗರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೂ ವಿಧಾನಸೌಧ ಚಲೋ ಪಾದಯಾತ್ರೆಗೆ ಎಚ್ಡಿಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ವಿಕಲಚೇತನ ನೌಕರರನ್ನು ಬೆಂಗಳೂರು ಮೈಸೂರು ಹೆದ್ದಾರಿಯ ಕಣಮಿಣಕೆ ಬಿಡಿಎ ವಸತಿ ಸಮುಚ್ಚಯದ ಬಳಿ ಪೊಲೀಸರು ತಡೆದಿದ್ದರು. ವಿಷಯ ತಿಳಿದ ಕೂಡಲೇ ಶ್ರವಣಬೆಳಗೊಳದಿಂದ ಸ್ಥಳಕ್ಕೆ ಆಗಮಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿಕಲಚೇತರನ್ನು ರಸ್ತೆಯಲ್ಲಿಯೇ ತಡೆದಿದ್ದ ಪೊಲೀಸರ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಹಲವು ತಿಂಗಳ ಕಾಲ ರಾಮನಗರದಲ್ಲಿ ಧರಣಿ ನಡೆಸಿದರೂ ರಾಜ್ಯ ಸರ್ಕಾರ ಸ್ಪಂದಿಸದ ಕಾರಣ ವಿಧಾನಸೌಧ ಚಲೋ ಹಮ್ಮಿಕೊಂಡಿದ್ದಾಗಿ ಮತ್ತು ಪೊಲೀಸರು ತಡೆದಿದ್ದರಿಂದ ರಸ್ತೆಯಲ್ಲೇ ಧರಣಿ ಕೂರಬೇಕಾಯಿತು ಎಂದು ವಿಕಲಚೇತನರು ಸಚಿವರಲ್ಲಿ ಅಳಲು ತೋಡಿಕೊಂಡರು



















