ಬೆಂಗಳೂರು: ಕರ್ನಾಟಕದಲ್ಲಿ ಎದುರಾಳಿಗಳನ್ನು ಬಲಹೀನ ಮಾಡಲು ಬಹಳ ವರ್ಷಗಳಿಂದ ಸ್ಟಿಂಗ್ ನಡೆಯುತ್ತಿದೆ. ಬಿಜೆಪಿಯಲ್ಲೂ ಒಂದು ತಂಡ, ಕಾಂಗ್ರೆಸ್ನಲ್ಲೂ ಒಂದು ತಂಡ ಇದರಲ್ಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕ್ಯಾಬಿನೆಟ್ನಲ್ಲೇ ಸ್ಟಿಂಗ್ ಆಗುತ್ತಿದೆ ಎಂದು ಸ್ವತಃ ಸಿಎಂ ಹೇಳಿದ್ದಾರೆ. ಆದರೆ ಗೃಹ ಇಲಾಖೆ ಯಾವುದೇ ತನಿಖೆ ಮಾಡುತ್ತಿಲ್ಲ. ಮಾಜಿ ಸಿಎಂ ಕೂಡ ಟ್ರ್ಯಾಪ್ನಲ್ಲಿ ಸಿಲುಕಿದ್ದಾರೆ. ಕೋಟ್ಯಾಂತರ ಹಣ ಹಾಗೂ ಕಾರು ಕೊಟ್ಟಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದು, ಇದರ ಹಿಂದೆ ಇರೋರನ್ನು ಪತ್ತೆ ಹಚ್ಚಬೇಕು. ಸಿದ್ದರಾಮಯ್ಯ ಅವರ ಪ್ರೀತಿಯ ಸಮುದಾಯದ ಹೆಣ್ಣುಮಗಳಿಂದಲೇ ಟ್ರಾಪ್ ಆಗಿದೆ. ಅವರೇ ಮಾಡಿಸಿದ್ದಾರೆ ಎಂಬ ಅನುಮಾನವಿದೆ. ಅವರಿಗೆ ಏನೆಲ್ಲಾ ಕೊಡುಗೆ ನೀಡಿದರೂ, ಕೊನೆಗೆ ಅವರ ಕುರ್ಚಿಗೇ ಕಂಟಕ ತಂದುಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
















