ಬೆಂಗಳೂರು: ನೀವೇನಾದರೂ ಉಪನ್ಯಾಸಕರಾಗಬೇಕು ಎಂದು ಬಯಸುತ್ತಿದ್ದರೆ, ಬೀದರ್ ವಿಶ್ವವಿದ್ಯಾಲಯವು ಸುವರ್ಣಾವಕಾಶ ನೀಡಿದೆ. ಹೌದು, ಬೀದರ್ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಅತಿಥಿ ಉಪನ್ಯಾಸಕರ ನೇಮಕಾತಿಗೆ (Bidar University Guest Lecturer Recruitment 2026) ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಬೀದರ್ ವಿಶ್ವವಿದ್ಯಾಲಯ, ಬೀದರ್
ಹುದ್ದೆ ಹೆಸರು: ಅತಿಥಿ ಉಪನ್ಯಾಸಕರು
ಒಟ್ಟು ಹುದ್ದೆ: ವಿವಿದ
ಉದ್ಯೋಗ ಸ್ಥಳ: ಬೀದರ್
ಸಂದರ್ಶನ ನಡೆಯುವ ದಿನಾಂಕ: ಅಕ್ಟೋಬರ್ 27
ಅರ್ಹ ವಿದ್ಯಾರ್ಹತೆಯ ಜತೆಗೆ ಪಿಎಚ್.ಡಿ, ನೆಟ್, ಸೆಟ್ ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹರು. ಕನ್ನಡ, ಇಂಗ್ಲಿಷ್, ಉರ್ದು, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಮಾಜ ಕಾರ್ಯ, ಮಹಿಳಾ ಅಧ್ಯಯನ, ವಾಣಿಜ್ಯಶಾಸ್ತ್ರ, ಗಣಕ ವಿಜ್ಞಾನ, ಗಣಿತ ಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಭೌತಶಾಸ್ತ್ರ, ಇತಿಹಾಸ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಬಸವಕಲ್ಯಾಣದ ಪಿ.ಜಿ ಸೆಂಟರ್ ನಲ್ಲಿ ಹುದ್ದೆಗಳು ಖಾಲಿ ಇವೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ https://bidaruniversity.karnataka.gov.in/ ಗೆ ಭೇಟಿ ನೀಡಬೇಕು
ನಿಮಗೆ ಬೇಕಾದ ಹುದ್ದೆಯ ಅಧಿಸೂಚನೆಯನ್ನು ಓದಬೇಕು
ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು ಭರ್ತಿ ಮಾಡಬೇಕು
ಭರ್ತಿ ಮಾಡಿದ ಅರ್ಜಿ ಹಾಗೂ ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ
Registrar (Administration), Bidar University, Bidar – Jnana Karanji Halahalli – K, Bidar – 585414, Karnataka.
ಇದನ್ನೂ ಓದಿ:ದಿನಕ್ಕೆ 200 ರೂ. ಉಳಿಸಿದರೂ 60 ತಿಂಗಳಿಗೆ 4.24 ಲಕ್ಷ ರೂ. ಗಳಿಕೆ: ಈ ಯೋಜನೆ ಬಗ್ಗೆ ತಿಳಿಯಿರಿ



















