ಬೆಂಗಳೂರು : ದಸರಾ ಹಬ್ಬದ ಹಿನ್ನೆಲೆಯಲ್ಲಿ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ತನ್ನ ಬಹುನಿರೀಕ್ಷಿತ ‘ಬಿಗ್ ಬಿಲಿಯನ್ ಡೇಸ್ ಸೇಲ್ 2026’ (Big Billion Days Sale 2026)ಗೆ ಸಜ್ಜಾಗಿದೆ. ಹಬ್ಬದ ಋತುವಿನ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಗಳು, ಲ್ಯಾಪ್ಟಾಪ್ ಗಳು, ಎಲೆಕ್ಟ್ರಾನಿಕ್ಸ್ ಮತ್ತು ಫ್ಯಾಷನ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ.
ಪ್ರಮುಖ ದಿನಾಂಕಗಳು ಮತ್ತು ಅರ್ಲಿ ಆ್ಯಕ್ಸೆಸ್
ಅರ್ಲಿ ಆ್ಯಕ್ಸೆಸ್: ಫ್ಲಿಪ್ ಕಾರ್ಟ್ ಪ್ಲಸ್, ವಿಐಪಿ ಸದಸ್ಯರು ಮತ್ತು ಫ್ಲಿಪ್ ಕಾರ್ಟ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅಕ್ಟೋಬರ್ 8ರ ಮಧ್ಯರಾತ್ರಿಯಿಂದ ಸೇಲ್ ಆರಂಭವಾಗಲಿದೆ.
ಸಾಮಾನ್ಯ ಗ್ರಾಹಕರಿಗೆ: ಅಕ್ಟೋಬರ್ 9ರಿಂದ ಎಲ್ಲರಿಗೂ ಸೇಲ್ ಲಭ್ಯವಾಗಲಿದೆ.
ಕರ್ಟನ್ ರೈಸರ್: ಮುಖ್ಯ ಸೇಲ್ ಗಿಂತ 5 ದಿನಗಳ ಮೊದಲೇ ಕೆಲವು ಆಯ್ದ ಉತ್ಪನ್ನಗಳು ಬಿಗ್ ಬಿಲಿಯನ್ ಡೇಸ್ ಬೆಲೆಯಲ್ಲಿ ಲಭ್ಯವಾಗುತ್ತಿವೆ.
ಐಫೋನ್ 17 ಮೇಲಿನ ಭಾರಿ ಆಫರ್
ಈ ಬಾರಿಯ ಸೇಲ್ ನ ಪ್ರಮುಖ ಆಕರ್ಷಣೆ ಎಂದರೆ ಐಫೋನ್ 17. 256GB ಮಾದರಿಯ ಆರಂಭಿಕ ಆಫರ್ ಬೆಲೆ 79,999 ರೂಪಾಯಿ ಎಂದು ಪ್ರದರ್ಶಿಸಲಾಗಿದೆ. 84,999 ರೂಪಾಯಿ ಮೌಲ್ಯದ ಐಫೋನ್ 17ಅನ್ನು ಬ್ಯಾಂಕ್ ಕಾರ್ಡ್ ಆಫರ್, ಎಕ್ಸ್ ಚೇಂಜ್ ಬೋನಸ್ ಸೇರಿ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಇದೇ ರೀತಿ, ನಥಿಂಗ್ ಮೊಬೈಲ್, ಇಯರ್ ಫೋನ್ ಗಳಲ್ಲೂ ಆಫರ್ ಗಳು ಲಭ್ಯ ಇವೆ.
ಸ್ಯಾಮ್ ಸಂಗ್, ಮೊಟೊರೊಲಾ ಮತ್ತು ಲ್ಯಾಪ್ ಟಾಪ್ ಆಫರ್
ಮೊಬೈಲ್ಗಳು: ಮೊಟೊರೊಲಾ 70 Fusion 29,999 ರೂಪಾಯಿಯಿಂದ ಆರಂಭವಾಗಲಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ S25 60 ಸಾವಿರ ರೂ.ಗಿಂತ ಕಡಿಮೆ, ಗ್ಯಾಲಕ್ಸಿ S25 ಎಫ್ಇ 50 ಸಾವಿರ ರೂ.ಗಿಂತ ಕಡಿಮೆ ಹಾಗೂ ಗ್ಯಾಲಕ್ಸಿ A36 30 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ದೊರೆಯಲಿವೆ.
ಲ್ಯಾಪ್ ಟಾಪ್ ಗಳು: ಸ್ಯಾಮ್ ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿಯ Core i3 ಮಾಡೆಲ್ 47,990 ರೂ., Core i5 ಮಾಡೆಲ್ 54,990 ರೂ. ಮತ್ತು Core i7 ಮಾಡೆಲ್ 64,990 ರೂ.ನಿಂದ ಲಭ್ಯವಿರಲಿವೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಬುಕ್ 5 AI 71,990 ರೂ.ನಿಂದ ಪ್ರಾರಂಭವಾಗಲಿದೆ.
ಬ್ಯಾಂಕ್ ಆಫರ್ ಮತ್ತು ರಿಯಾಯಿತಿಗಳು
ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳ ಬಳಕೆಯ ಮೇಲೆ 10% ವರೆಗೆ ತಕ್ಷಣದ ರಿಯಾಯಿತಿ ಸಿಗಲಿದೆ.
ಫ್ಲಿಪ್ ಕಾರ್ಟ್ ಪೇ ಲೇಟರ್ ಮತ್ತು ಫ್ಲಿಪ್ ಕಾರ್ಟ್ ಇಎಂಐ ಮೂಲಕ ನೋ ಕಾಸ್ಟ್ ಇಎಂಐ ಸೌಲಭ್ಯ ಹಾಗೂ 500 ರೂ.ನಿಂದ 1 ಸಾವಿರ ರೂಪಾಯಿವರೆಗೆ ಹೆಚ್ಚುವರಿ ರಿಯಾಯಿತಿ ಇರಲಿದೆ. ಯುಪಿಐ ಮೂಲಕ ಫ್ಲಿಪ್ ಕಾರ್ಟ್ ಗಿಫ್ಟ್ ಕಾರ್ಡ್ ಖರೀದಿಸಿದರೆ 5% ರಿಯಾಯಿತಿ ಲಭ್ಯ.
(ಗಮನಿಸಿ: ಎಕ್ಸ್ ಚೇಂಜ್ ಮೌಲ್ಯ, ಬ್ಯಾಂಕ್ ಆಫರ್ ಗಳು ಮತ್ತು ಸ್ಟಾಕ್ ಲಭ್ಯತೆಯ ಆಧಾರದ ಮೇಲೆ ಅಂತಿಮ ಬೆಲೆ ಬದಲಾಗಬಹುದು.)
ಇದನ್ನೂ ಓದಿ :“ವಯಸ್ಸು ಕೇವಲ ಒಂದು ಸಂಖ್ಯೆ”: WCL 2026 ಪಂದ್ಯದಲ್ಲಿ 42ರ ಹರೆಯದ ಡ್ವೇನ್ ಬ್ರಾವೋ ಅವರಿಂದ ಅದ್ಭುತವಾದ ಏಕಹಸ್ತ ಕ್ಯಾಚ್!



















