ಬೆಂಗಳೂರು : ಕೇಂದ್ರ ಸರ್ಕಾರವು 2 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳಿಗೆ ಶೇ.0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಘೋಷಣೆ ಮಾಡಿದೆ. ಅಕ್ಟೋಬರ್ 15ರಿಂದಲೇ ಎಂಡಿಆರ್ ಅನ್ವಯವಾಗುತ್ತಿದೆ. ಇದರ ಬೆನ್ನಲ್ಲೇ, ಎಂಡಿಆರ್ ಶುಲ್ಕ ಉಳಿಸುವ ದೃಷ್ಟಿಯಿಂದ ಗ್ರಾಹಕರೊಬ್ಬರು ವ್ಯಾಪಾರಿಗೆ 6 ಸಾವಿರ ರೂಪಾಯಿಯನ್ನು ಒಮ್ಮೆಯೇ ಪಾವತಿಸುವ ಬದಲು 3 ಬಾರಿ 2 ಸಾವಿರ ರೂ.ನಂತೆ ಪಾವತಿಸಿದರೆ ಏನಾಗುತ್ತದೆ ಎಂಬುದರ ಕುರಿತು ಭಾರಿ ಚರ್ಚೆಯಾಗುತ್ತದೆ.
ಯಾವುದೇ ವ್ಯಕ್ತಿಯು 2 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತವನ್ನು ಯುಪಿಐ ಮೂಲಕ ಪಾವತಿಸಿದರೆ ಶೇ.0.4ರಷ್ಟು ಶುಲ್ಕ ವಿಧಿಸಲಾಗುತ್ತದೆ. ಉದಾಹರಣೆಗೆ, ನೀವು 6 ಸಾವಿರ ರೂ. ಪಾವತಿಸಬೇಕಿದ್ದರೆ 24 ರೂಪಾಯಿ ಶುಲ್ಕ ಆಗುತ್ತದೆ. ಇದನ್ನು ತಪ್ಪಿಸಲು ನೀವು 3 ಬಾರಿ ತಲಾ 2 ಸಾವಿರ ರೂ.ನಂತೆ ಪಾವತಿಸಬಹುದು. ಆಗ ನಿಮಗೆ 24 ರೂಪಾಯಿ ಉಳಿತಾಯವಾಗುತ್ತದೆ.
ಆದರೆ, ಇದೇ ರೀತಿ ಎಂಡಿಆರ್ ಉಳಿಸಲು ಒಬ್ಬರೇ ವ್ಯಾಪಾರಿಗೆ ಪದೇಪದೆ ಯುಪಿಐ ಪಾವತಿ ಮಾಡುವುದು ಅಪಾಯಕಾರಿ ಆಗಬಹುದು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. 6 ಸಾವಿರ ರೂಪಾಯಿಯನ್ನು ಒಮ್ಮೆಯೇ ಮಾಡುವ ಬದಲು ತಲಾ 2 ಸಾವಿರ ರೂ.ನಂತೆ 3 ಬಾರಿ ಮಾಡಿದರೆ ಅದನ್ನು ಶಂಕಾಸ್ಪದ ವಹಿವಾಟು ಎಂದು ಆ ಪಾವತಿಯನ್ನು ತಡೆಹಿಡಿಯಬಹುದು. ಇಲ್ಲವೇ, ಕೆಲ ಸಮಯದವರೆಗೆ ಯುಪಿಐ ಪಾವತಿಯನ್ನು ಬ್ಲಾಕ್ ಮಾಡಬಹುದು ಎಂದು ಎಚ್ಚರಿಸಿದ್ದಾರೆ.
ಸದ್ಯದ ಮಟ್ಟಿಗೆ, ಒಬ್ಬ ವ್ಯಕ್ತಿಯು ವ್ಯಾಪಾರಿಗೆ ದಿನದಲ್ಲಿ ಎಷ್ಟು ಬಾರಿ ಬೇಕಾದರೂ ಯುಪಿಐ ಪಾವತಿ ಮಾಡಬಹುದು. ಮುಂದೊಂದು ದಿನ ಎಂಡಿಆರ್ ಉಳಿಸಲು 2 ಸಾವಿರ ರೂ.ನಂತೆ ಹಲವು ಬಾರಿ ಯುಪಿಐ ಮಾಡಲು ಆರಂಭಿಸಿದರೆ, ಮಿತಿ ಹೇರಬಹುದು ಎಂದು ಕೂಡ ಹೇಳಲಾಗುತ್ತಿದೆ. ಆದಾಗ್ಯೂ, ಮರ್ಚೆಂಟ್ ಗಳಿಗೆ ಎಂಡಿಆರ್ ಶುಲ್ಕ ವಿಧಿಸಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ :ಕೇಂದ್ರ ಸರ್ಕಾರದ NAL ಸಂಸ್ಥೆಯಲ್ಲಿ SRF, JRF ಹುದ್ದೆಗಳ ನೇಮಕಾತಿ!



















