ಬೆಂಗಳೂರು : ಬೆಂಗಳೂರಲ್ಲಿರುವ ಪ್ರತಿಷ್ಠಿತ ಬಂಟರ ಸಂಘದ 2026-29ನೇ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಚುನಾವಣೆ ಸಂಘದ ಆವರಣ ಹಾಗೂ ಮುಲ್ಕಿ ಸುಂದರರಾಮ್ ಶೆಟ್ಟಿ ಮೆಮೋರಿಯಲ್ ಎಂ.ಎಸ್.ಆರ್.ಎಸ್. ನಗರ ಟ್ರಸ್ಟ್ ಹಾಲ್ನಲ್ಲಿ ಏಕಕಾಲದಲ್ಲಿ ನಡೆಯಿತು. ಚುನಾವಣೆಯಲ್ಲಿ ಡಾ. ದೀಪಕ್ ಶೆಟ್ಟಿ ಅವರು ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶ್ರೀ ಮಧುಕರ್ ಎಂ. ಶೆಟ್ಟಿ ಹಾಗೂ ಶ್ರೀಮತಿ ಸೌಮ್ಯಪ್ರಿಯ ಹೆಗ್ಡೆ ಉಪಾಧ್ಯಕ್ಷರಾಗಿ, ಶ್ರೀ ಅಮರನಾಥ ಶೆಟ್ಟಿ ಗೌರವ ಕಾರ್ಯದರ್ಶಿಯಾಗಿ, ಶ್ರೀಮತಿ ಸುರೇಖಾ ಶೆಟ್ಟಿ ಜೊತೆ ಕಾರ್ಯದರ್ಶಿಯಾಗಿ ಹಾಗೂ ಶ್ರೀ ರಮಿತ್ ಬಿ. ಶೆಟ್ಟಿ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಮತಿ ಅನಿತಾ ಪಿ. ಭಂಡಾರಿ, ಶ್ರೀ ಅರುಣ್ ಕುಮಾರ್ ಶೆಟ್ಟಿ ಹೆಚ್., ಸಿಎ. ಚಂದ್ರಶೇಖರ್ ಶೆಟ್ಟಿ, ಶ್ರೀಮತಿ ಹೀರಾ ಅನೂಪ್ ಹೆಗ್ಡೆ, ಶ್ರೀ ಕೀರ್ತನ್ ಶೆಟ್ಟಿ, ಸಿಎ. ಕಿಶೋರ್ ಶೆಟ್ಟಿ, ಶ್ರೀಮತಿ ಮಾಲತಿ ಜೆ. ಶೆಟ್ಟಿ, ಶ್ರೀ ನಿತ್ಯರಂಜನ್ ಶೆಟ್ಟಿ, ಶ್ರೀ ಪ್ರಸಾದ್ ಕುಮಾರ್ ಶೆಟ್ಟಿ, ಶ್ರೀ ಪ್ರಶಾಂತ್ ಶೆಟ್ಟಿ ಎಸ್., ಶ್ರೀ ಪ್ರತಾಪ್ ಶೆಟ್ಟಿ, ಶ್ರೀ ರಾಮ್ದಾಸ್ ಶೆಟ್ಟಿ ಕೆ.ಎಸ್., ಶ್ರೀಮತಿ ಶಕುಂತಲ ಶೆಟ್ಟಿ, ಶ್ರೀ ಸುರೇಂದ್ರ ಶೆಟ್ಟಿ ಹೆಚ್. ಹಾಗೂ ಶ್ರೀ ಉಮೇಶ್ ಪೂಂಜ ಡಿ. ಆಯ್ಕೆಯಾಗಿದ್ದಾರೆ.
ಸಂಘ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ವಿವಿಧ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅಮೂಲ್ಯ ಸಹಕಾರ ಹಾಗೂ ಬೆಂಬಲ ನೀಡಿದ ಎಲ್ಲ ಸದಸ್ಯರಿಗೆ ನೂತನ ಸಮಿತಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದೆ. ನೂತನ ಅವಧಿಯಲ್ಲಿಯೂ ಇದೇ ರೀತಿಯ ಸಹಕಾರ ಹಾಗೂ ಬೆಂಬಲವನ್ನು ಮುಂದುವರಿಸುವಂತೆ ಸದಸ್ಯರಲ್ಲಿ ಮನವಿ ಮಾಡಿದೆ.
ಇದನ್ನೂ ಓದಿ : ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘಕ್ಕೆ ನೂತನ ಆಡಳಿತ ಮಂಡಳಿ ; ಡಾ.ದೀಪಕ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆ!



















