ಬೆಂಗಳೂರು : ಕರ್ನಾಟಕ ಸರ್ಕಾರದ ಹುದ್ದೆಗಳನ್ನು ಪಡೆಯಬೇಕು ಎಂದು ಬಯಸುತ್ತಿರುವವರಿಗೆ ಸುವರ್ಣಾವಕಾಶ ದೊರೆತಿದೆ. ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ (Bannerghatta Biological Park Recruitment 2026) ಖಾಲಿ ಇರುವ 2 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಪಶು ವೈದ್ಯಾಧಿಕಾರಿ ಹಾಗೂ ಪಶುವೈದ್ಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಹೀಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಬನ್ನೇರುಘಟ್ಟ ಜೈವಿಕ ಉದ್ಯಾನ
ಒಟ್ಟು ಹುದ್ದೆಗಳು: 2
ಹುದ್ದೆಗಳ ಹೆಸರು: ಪಶು ವೈದ್ಯಾಧಿಕಾರಿ ಹಾಗೂ ಪಶುವೈದ್ಯ ಸಹಾಯಕ
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 28
ತಲಾ ಒಂದು ಪಶು ವೈದ್ಯಾಧಿಕಾರಿ ಹಾಗೂ ಪಶುವೈದ್ಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ B.V.Sc&A.H, M.V.Sc ಕೋರ್ಸ್ ಮುಗಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 20 ಸಾವಿರ ರೂಪಾಯಿಯಿಂದ 80 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.
ಅರ್ಜಿ ಸಲ್ಲಿಸೋದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ bannerughattabiopark.org ಗೆ ಭೇಟಿ ನೀಡಬೇಕು.
ನಿಮಗೆ ಬೇಕಾದ ಹುದ್ದೆಯ ವಿಭಾಗವನ್ನು ಆಯ್ಕೆ ಮಾಡಬೇಕು.
ಅರ್ಜಿಯ ಪ್ರಿಂಟೌಟ್ ತೆಗದುಕೊಂಡು ಭರ್ತಿ ಮಾಡಬೇಕು
ಅರ್ಜಿಯ ಜತೆಗೆ ಅಗತ್ಯ ದಾಖಲೆಗಳ ಸಾಫ್ಟ್ ಕಾಪಿಗಳನ್ನು ed@bannerughattabiopark.org ಗೆ ಮೇಲ್ ಮಾಡಬೇಕು.
ಇದನ್ನೂ ಓದಿ : 24 ವರ್ಷಗಳ ಬರ ನೀಗಿಸುವ ತವಕ : ಭಾರತದಲ್ಲೇ ಐತಿಹಾಸಿಕ ಏಕದಿನ ಸರಣಿ ಗೆಲುವಿನತ್ತ ಡ್ಯಾರೆನ್ ಸ್ಯಾಮಿ ಪಡೆ



















