ಬೆಂಗಳೂರು : ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ ಇರುವುದು ಸಾಮಾನ್ಯ. ಇನ್ನು ಹಬ್ಬಗಳು, ಸಾರ್ವಜನಿಕ ರಜೆಗಳಿದ್ದರೆ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಅದರಂತೆ, ಸೆಪ್ಟೆಂಬರ್ ನಲ್ಲಿ 14 ದಿನ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಹಾಗಾಗಿ, ಗ್ರಾಹಕರು ರಜೆ ಇರುವ ದಿನಾಂಕ ನೋಡಿಕೊಂಡು ಬ್ಯಾಂಕ್ ಗಳಿಗೆ ತೆರಳಬಹುದು. ಆದಾಗ್ಯೂ, ನೆಟ್ ಬ್ಯಾಂಕಿಂಗ್ ಹಾಗೂ ಯುಪಿಐ ಸೇವೆಗಳು ಜನರಿಗೆ ಲಭ್ಯವಿರಲಿವೆ. ಸೆಪ್ಟೆಂಬರ್ ನಲ್ಲಿ ಯಾವ ದಿನ ಬ್ಯಾಂಕ್ ಗಳಿಗೆ ರಜೆ ಇರಲಿದೆ ಎಂಬುದರ ಮಾಹಿತಿ ಇಲ್ಲಿದೆ.
ಬ್ಯಾಂಕ್ ಮುಷ್ಕರ
ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ವತಿಯಿಂದ ಸೆಪ್ಟೆಂಬರ್ 11 ಹಾಗೂ ಸೆಪ್ಟೆಂಬರ್ 28 ರಿಂದ 30ರವರೆಗೆ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಸಾರ್ವಜನಿಕ ವಲಯದ ಬ್ಯಾಂಕ್ ಗಳ ಕೆಲಸದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಇದರ ಹೊರತಾಗಿ, ಸೆ.6, 13, 20 ಹಾಗೂ 27ರಂದು ಭಾನುವಾರ ಇರುವ ಕಾರಣ ರಜೆ ಇರಲಿದೆ. ಹಾಗೆಯೇ, ಸೆ.12 ಮತ್ತು 26ರಂದು 2ನೇ ಶನಿವಾರದ ಹಿನ್ನೆಲೆಯಲ್ಲಿ ರಜೆ ಇರಲಿದೆ.
ಹಾಗೆಯೇ, ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಇರುವ ಕಾರಣ ದೇಶದ ಬಹುತೇಕ ಭಾಗಗಳಲ್ಲಿ ರಜೆ ಇರಲಿದೆ. ಸೆಪ್ಟೆಂಬರ್ 11ರಂದು ಜೈಪುರ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆ ಇರುವ ಕಾರಣ ಅಲ್ಲಿ ಮಾತ್ರ ರಜೆ ಇರಲಿದೆ. ಹಾಗೆಯೇ, ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಇರುವ ಕಾರಣ ದೇಶದ ಬಹುತೇಕ ಭಾಗಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಘೋಷಿಸಲಾಗುತ್ತದೆ.
ಸೆ.15ರಂದು ಸಂವತ್ಸರಿ ಇರುವ ಕಾರಣ ಒಡಿಶಾ, ಗೋವಾ ಹಾಗೂ ಗುಜರಾತ್ ನಲ್ಲಿ ರಜೆ ಇರಲಿದೆ. ಸೆ.21ರಂದು ನಾರಾಯಣ ಗುರು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕೇರಳದಲ್ಲಿ ರಜೆ ಘೋಷಿಸಲಾಗಿದೆ. ಸೆ.22ರಂದು ಕರ್ಮ ಪೂಜೆ ಹಿನ್ನೆಲೆಯಲ್ಲಿ ಜಾರ್ಖಂಡ್ ನಲ್ಲಿ ರಜೆ ಇರಲಿದೆ. ಸೆ.23ರಂದು ಮಹಾರಾಜ ಹರಿ ಸಿಂಗ್ ಜನ್ಮದಿನದ ಕಾರಣ ಜಮ್ಮು ಮತ್ತು ಶ್ರೀನಗರದಲ್ಲಿ ಹಾಗೂ ಸೆಪ್ಟೆಂಬರ್ 25ರಂದು ಇಂದ್ರ ಜಾತ್ರಾ ಹಿನ್ನೆಲೆಯಲ್ಲಿ ಗ್ಯಾಂಗ್ ಟಾಕ್ ನಲ್ಲಿ ರಜೆ ಇರಲಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ ಇಸ್ರೋ ಸಂಸ್ಥೆಯಲ್ಲಿ 175 ಹುದ್ದೆಗಳ ನೇಮಕಾತಿ : ಕೂಡಲೇ ಅರ್ಜಿ ಸಲ್ಲಿಸಿ



















