ಬೆಂಗಳೂರು : ಬ್ಯಾಂಕ್ ಖಾತೆ ತೆರೆಯಲು, ಯಾವುದೇ ರೀತಿ ಹೂಡಿಕೆ ಮಾಡುವುದು, ಸರ್ಕಾರದ ಯೋಜನೆಗಳ ಲಾಭ ಪಡೆಯುವುದು, ಐಟಿಆರ್ ಸಲ್ಲಿಕೆ ಸೇರಿ ಹತ್ತಾರು ಸೌಲಭ್ಯಗಳನ್ನು ಪಡೆಯಲು ಪ್ಯಾನ್ ಕಾರ್ಡ್ ಈಗ ಬೇಕೇಬೇಕು. ಆದರೆ, ಆಕಸ್ಮಿಕವಾಗಿ ನಮ್ಮ ಓರಿಜಿನಲ್ ಪ್ಯಾನ್ ಕಾರ್ಡ್ ಕಳೆದುಹೋದರೆ ಭಾರಿ ಸಂಕಷ್ಟಕ್ಕೆ ಸಿಲುಕುತ್ತೇವೆ. ಆದರೆ, ತುರ್ತು ಸಂದರ್ಭಗಳಲ್ಲಿ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡುವ ಮೂಲಕ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಡೆಯಬಹುದು. ಹಾಗಾದರೆ, ಹೇಗೆ ಡೌನ್ ಲೋಡ್ ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.
ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡುವುದು ಹೇಗೆ?
• ಮೊದಲಿಗೆ https://onlineservices.proteantech.in/paam/requestAndDownloadEPAN.html ವೆಬ್ ಸೈಟ್ ಗೆ ಭೇಟಿ ನೀಡಿ.
• ಪ್ಯಾನ್ ಕಾರ್ಡ್ ಸಂಖ್ಯೆ, ಆಧಾರ್, ಜನ್ಮದಿನಾಂಕ ಸೇರಿ ಅಗತ್ಯ ಮಾಹಿತಿ ಒದಗಿಸಿ.
• ಸ್ಕ್ರೀನ್ ಮೇಲೆ ಕಾಣಿಸುವ ಸೆಕ್ಯುರಿಟಿ ಕೋಡ್ ಅಥವಾ ಕ್ಯಾಪ್ಚಾವನ್ನು ಸರಿಯಾಗಿ ನಮೂದಿಸಿ ‘Submit’ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಮೊಬೈಲ್ ನಂಬರ್ ಗೆ ಬಂದ ಒಟಿಪಿಯನ್ನು ನಮೂದಿಸಿ
• ಯುಪಿಐ, ಡೆಬಿಟ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ 8.26 ರೂಪಾಯಿ ಪಾವತಿಸಿ.
• ಪಾವತಿ ಯಶಸ್ವಿಯಾದ ನಂತರ, ನಿಮ್ಮ ಇ-ಪ್ಯಾನ್ ಕಾರ್ಡ್ ಪಿಡಿಎಫ್ ಫಾರ್ಮ್ಯಾಟ್ ಡೌನ್ ಲೋಡ್ ಮಾಡಿ.
ಇದು ಕಾನೂನುಬದ್ಧವೇ?
ಹೀಗೆ ಡೌನ್ಲೋಡ್ ಮಾಡಿಕೊಂಡ ಪಿಡಿಎಫ್ ಫೈಲ್ ಅನ್ನು ಪ್ರಿಂಟರ್ ಮೂಲಕ ಪ್ರಿಂಟ್ ತೆಗೆದುಕೊಂಡು ಲ್ಯಾಮಿನೇಷನ್ ಮಾಡಿಸಿ ಬಳಸಿಕೊಳ್ಳಬಹುದು. ಇದು ಅಸಲಿ ಪ್ಯಾನ್ ಕಾರ್ಡ್ ನಷ್ಟೇ ಕಾನೂನುಬದ್ಧವಾಗಿ ಮಾನ್ಯವಾಗಿರುತ್ತದೆ. ನೀವು ಯಾವುದೇ ಸೌಲಭ್ಯ ಪಡೆಯಲು ಇದೇ ಪ್ಯಾನ್ ಕಾರ್ಡ್ ಅನ್ನು ನೀಡಬಹುದು.
ಇದನ್ನೂ ಓದಿ : ಇನ್ಫಿನಿಕ್ಸ್ ಹಾಟ್ 70 ಪ್ರೊ 5G ಭಾರತದಲ್ಲಿ ಬಿಡುಗಡೆಗೆ ಸಜ್ಜು : ಲಾಂಚ್ ಡೇಟ್, ಫೀಚರ್ಗಳ ಮಾಹಿತಿ ಇಲ್ಲಿದೆ!



















