ಬೆಂಗಳೂರು : ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಆ್ಯಕ್ಸಿಸ್ ಬ್ಯಾಂಕ್ ಈಗ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಭಾರಿ ಬದಲಾವಣೆ ಜಾರಿಗೆ ತರುತ್ತಿದೆ. ವಿಳಂಬ ಪಾವತಿ ಮೇಲಿನ ದಂಡ ಹೆಚ್ಚಳ ಸೇರಿ ಹಲವು ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಹೊಸ ನಿಯಮಗಳು ಇದೇ ಆಗಸ್ಟ್ 28ರಿಂದ ಜಾರಿಗೆ ಬರಲಿವೆ. ಹಾಗಾದರೆ, ಆ್ಯಕ್ಸಿಸ್ ಬ್ಯಾಂಕ್ ಜಾರಿಗೆ ತರುತ್ತಿರುವ ಹೊಸ ನಿಯಮಗಳು ಏನು? ಇವುಗಳಿಂದ ಗ್ರಾಹಕರಿಗೆ ಯಾವ ರೀತಿ ಪರಿಣಾಮ ಆಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
ಡಿಸಿಸಿ ಮಾರ್ಕಪ್ ಏರಿಕೆ: ವಿದೇಶಿ ವಹಿವಾಟುಗಳ ಸಂದರ್ಭದಲ್ಲಿ, ಸ್ಥಳೀಯ ಕರೆನ್ಸಿಯ ಬದಲು ಭಾರತೀಯ ರೂಪಾಯಿಯಲ್ಲಿ ಪಾವತಿಸಲು ಆಯ್ಕೆ ಮಾಡಿಕೊಂಡರೆ, ಈಗ ಅನ್ವಯವಾಗುವ 1.5% ಮಾರ್ಕಪ್ ಶುಲ್ಕವನ್ನು 3.5% ಗೆ (ತೆರಿಗೆಯೊಂದಿಗೆ) ಹೆಚ್ಚಿಸಲಾಗಿದೆ. ಇದು ವಿದೇಶಗಳಲ್ಲಿ ಮತ್ತು ವಿದೇಶಿ ಮೂಲದ ಮರ್ಚೆಂಟ್ ಗಳೊಂದಿಗೆ ನಡೆಯುವ ವಹಿವಾಟುಗಳಿಗೆ ಅನ್ವಯಿಸುತ್ತದೆ. ಗ್ರಾಹಕರಿಗೆ ಇದು ಹೊರೆಯಾಗಲಿದೆ.
ಹೀಗಿರಲಿದೆ ಲೇಟ್ ಪೇಮೆಂಟ್ ದಂಡ
₹500 ರವರೆಗೆ: ಶುಲ್ಕವಿಲ್ಲ
₹501 ರಿಂದ ₹5,000: ₹500
₹5,001 ರಿಂದ ₹10,000: ₹750
₹10,001 ರಿಂದ ₹50,000: ₹1,200
₹50,000 ಕ್ಕಿಂತ ಹೆಚ್ಚು: ₹1,300
ವಿಳಂಬವಾಗಿ ಬಾವತಿಸುವ ಬಿಲ್ ನ ಬಾಕಿ ಮೊತ್ತದ ಮೇಲೆ ವಿಧಿಸುವ ದಂಡದ ರಚನೆಯನ್ನು ಬದಲಿಸಲಾಗಿದೆ. ನಿರ್ದಿಷ್ಟವಾಗಿ, 50 ಸಾವಿರ ರೂಪಾಯಿಗಿಂತ ಹೆಚ್ಚಿನ ಬಾಕಿ ಮೊತ್ತಕ್ಕೆ ಈಗ 1,300 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಇದು ಕೂಡ ತಡವಾಗಿ ಬಿಲ್ ಪಾವತಿಸುವವರಿಗೆ ಭಾರಿ ಹೊರೆಯಾಗಲಿದೆ. ಹಾಗಾಗಿ, ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಯಾವುದೇ ಕಾರಣಕ್ಕೂ ಡ್ಯೂ ಡೇಟ್ ನಂತರ ಬಿಲ್ ಪಾವತಿಸದೆ, ನಿಗದಿತ ದಿನಾಂಕದೊಳಗೆ ಪಾವತಿಸಬೇಕು. ಇಲ್ಲದಿದ್ದರೆ ದಂಡದ ಹೊರೆಯು ಗ್ರಾಹಕರನ್ನು ಬಾಧಿಸಲಿದೆ.
ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆ ಇಡಲಿವೆ 5 ಹೊಸ ಡೀಸೆಲ್ SUVಗಳು : ಥಾರ್‌ನಿಂದ ಕಿಯಾ ಸೊರೆಂಟೊವರೆಗೆ ಸಂಪೂರ್ಣ ವಿವರ!



















