ಬೆಂಗಳೂರು : ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮೆಜೆಸ್ಟಿಕ್ನತ್ತ ತೆರಳಲು ಮನೆಯಿಂದ ಹೊರ ಬರ್ತಿದ್ದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ತಡೆಯೊಡ್ಡುತ್ತಿದ್ದಂತೆ ವಾಟಾಳ್ ನಾಗರಾಜ್ ಅವರು ತಮ್ಮ ನಿವಾಸದ ಗೇಟ್ ಒಳಗಡೆಯೇ ಕುಳಿತಿದ್ದು,“ನಾನು ಮನೆಯಿಂದ ಆಚೆಯೇ ಬರುವುದಿಲ್ಲ, ವಶಕ್ಕೆ ಪಡೆಯುವ ಕಾರಣಕ್ಕಾಗಿ ಹೊರಬರಲ್ಲ” ಎಂದು ಪಟ್ಟು ಹಿಡಿದ್ದರು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರದ ನಿಲುವನ್ನು ಖಂಡಿಸಿ ವಾಟಾಳ್ ನಾಗರಾಜ್ ಅವರು ಬಾಯಿಗೆ ಸೆಲ್ಲೋ ಟೇಪ್ ಹಾಕಿಕೊಳ್ಳುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ತಡೆಯಲು ಆಗಮಿಸಿದ್ದ ಎಸಿಪಿ ತನ್ವೀರ್ ಹಾಗೂ ಡಿಸಿಪಿ ನೇಮಗೌಡ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಸುಮಾರು ಅರ್ಧ ಗಂಟೆಗಳ ಕಾಲ ವಾಟಾಳ್ ನಾಗರಾಜ್ ಅವರ ಮನವೊಲಿಸಲು ತೀವ್ರ ಯತ್ನ ನಡೆಸಿತು.
ಆದರೆ, ಸರ್ಕಾರದ ನಡೆಗೆ ಆಕ್ರೋಶ ಹೊರಹಾಕಿದ ವಾಟಾಳ್ ನಾಗರಾಜ್ ಅವರು ಅಧಿಕಾರಿಗಳ ವಿನಂತಿಗೆ ಕೊನೆಗೂ ಜಗ್ಗಲಿಲ್ಲ. ಪೊಲೀಸರ ಮನವೊಲಿಕೆಗೆ ಒಪ್ಪದಿದ್ದಾಗ ಬೇರೆ ಯಾವುದೇ ಆಯ್ಕೆ ಇಲ್ಲದೆ ಕೊನೆಗೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಕರೆದೊಯ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕರ್ನಾಟಕ ಬಂದ್‌ಗೆ ಸಿಗದ ಬೆಂಬಲ ; ಹೊಸಪೇಟೆಯಲ್ಲಿ ಎಂದಿನಂತೆ ಬಸ್‌ಗಳ ಸಂಚಾರ!



















