ಬೆಂಗಳೂರು : ಸತತ ಇಳಿಕೆ ಕಂಡಿದ್ದ ಬಂಗಾರದ ಬೆಲೆಯು ಬುಧವಾರ ಏರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಜಾಸ್ತಿಯಾದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ದೇಶಾದ್ಯಂತ ಚಿನ್ನದ ಧಾರಣೆಯಲ್ಲಿ (Gold Rate Today) ಭಾರಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು (ಜುಲೈ 15) 10 ಗ್ರಾಂ ಚಿನ್ನದ ಬೆಲೆಯಲ್ಲಿ 770 ರೂಪಾಯಿ ಏರಿಕೆಯಾಗಿದ್ದು, ಖರೀದಿದಾರರ ಜೇಬಿಗೆ ಹೊರೆಯಾಗಲಿದೆ.
ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 770 ರೂಪಾಯಿ ಇಳಿಕೆಯಾಗಿದೆ. ಇನ್ನು, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಬುಧವಾರ 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರವು 14,357 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ, 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರವು 13,160 ರೂಪಾಯಿ ತಲುಪಿದೆ.
ಕಳೆದ 4 ದಿನಗಳಲ್ಲಿ ಬಂಗಾರದ ಧಾರಣೆಯಲ್ಲಿ ಮೂರು ಬಾರಿ ಇಳಿಕೆಯಾಗಿತ್ತು. ಹಾಗಾಗಿ, ಬುಧವಾರ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿತ್ತು. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆಯಾಗಿರುವುದರಿಂದ ಭಾರತದಲ್ಲಿ ಬೆಲೆಯ ಮೇಲೆ ಪರಿಣಾಮ ಬೀರಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿರುವ ಕಾರಣ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಳಿತವನ್ನು ನಿರೀಕ್ಷಿಸಲಾಗಿದೆ.
ಬೆಳ್ಳಿ ಧಾರಣೆಯಲ್ಲಿ ಯಥಾಸ್ಥಿತಿ
ಚಿನ್ನದ ಬೆಲೆಯಲ್ಲಿ ಏರಿಕೆಯಾದರೂ ಬುಧವಾರ ಕೂಡ ಬೆಳ್ಳಿಯ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಬುಧವಾರ ಒಂದು ಕೆ.ಜಿ ಬೆಳ್ಳಿಯ ಬೆಲೆಯು 2.35 ಲಕ್ಷ ರೂಪಾಯಿ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಯಾವುದೇ ಬದಲಾವಣೆ ಆಗಿಲ್ಲ. ಜುಲೈ 11ರಂದು ಮಾತ್ರ ಒಂದು ಕೆ.ಜಿ ಬೆಲೆಯಲ್ಲಿ 5 ಸಾವಿರ ರೂ. ಕಡಿಮೆಯಾಗಿತ್ತು.
ಇದನ್ನೂ ಓದಿ : ಭ್ರಷ್ಟ AROಗೆ ರಕ್ಷಣೆ? ಬ್ಯಾಡರಹಳ್ಳಿ ಇನ್ಸ್‌ಪೆಕ್ಟರ್ ವಿರುದ್ಧ ಕಮಿಷನರ್‌ಗೆ N.R ರಮೇಶ್ ದೂರು!



















