ಬೆಂಗಳೂರು : ನೀವು ಭಾರತೀಯ ಸ್ಟೇಟ್ ಬ್ಯಾಂಕ್ (SBI Credit Card) ಬಳಸುತ್ತಿದ್ದೀರಾ? ಈ ಕ್ರೆಡಿಟ್ ಕಾರ್ಡ್ ಮೂಲಕ ಹಾಗಾದರೆ, ಜುಲೈ 1ರಿಂದ ಹಲವು ನಿಮ್ಮ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗಲಿವೆ. ಅದರಲ್ಲೂ, ಹೆಚ್ಚಿನ ವಹಿವಾಟುಗಳನ್ನು ಈ ಕಾರ್ಡ್ ಗಳ ಮೂಲಕ ನಡೆಸಿ, ಹೆಚ್ಚಿನ ರಿವಾರ್ಡ್ ಪಾಯಿಂಟ್ ಗಳನ್ನು ಪಡೆಯುತ್ತಿರುವವರಿಗೆ ಹೊಸ ನಿಯಮಗಳು ಪ್ರಮುಖವಾಗಿವೆ.
ಹೌದು, ಎಸ್ ಬಿಐನ ಫೋನ್ ಪೇ ಎಸ್ ಬಿಐ ಕಾರ್ಡ್ ಸೆಲೆಕ್ಟ್ ಬ್ಲ್ಯಾಕ್ (PhonePe SBI Card SELECT BLACK) ಹಾಗೂ ಫೋನ್ ಪೇ ಎಸ್ ಬಿಐ ಕಾರ್ಡ್ ಪರ್ಪಲ್ (PhonePe SBI Card PURPLE) ಕಾರ್ಡ್ ನಿಯಮಗಳು ಬದಲಾಗುತ್ತಿವೆ. ಫೋನ್ ಪೇ ಎಸ್ ಬಿಐ ಕಾರ್ಡ್ ಸೆಲೆಕ್ಟ್ ಬ್ಲ್ಯಾಕ್ ಕಾರ್ಡ್ ಹೊಂದಿರುವವರು ಇದುವರೆಗೆ ಆನ್ ಲೈನ್ ಮೂಲಕ ಹಣ ಪಾವತಿಸಿದರೆ ಇದುವರೆಗೆ ಗರಿಷ್ಠ 2 ಸಾವಿರ ರಿವಾರ್ಡ್ ಪಾಯಿಂಟ್ ಗಳು ಲಭಿಸುತ್ತಿದ್ದವು. ಈಗ ಈ ಪಾಯಿಂಟ್ ಗಳನ್ನು 1 ಸಾವಿರಕ್ಕೆ ಇಳಿಸಲಾಗಿದೆ.
ಹಾಗೆಯೇ, ಈ ಕ್ರೆಡಿಟ್ ಕಾರ್ಡ್ ಬಳಸಿ ಇನ್ಶೂರೆನ್ಸ್ ಪ್ರೀಮಿಯಂ ಕಟ್ಟಿದರೆ, ತಿಂಗಳಿಗೆ 500 ಪಾಯಿಂಟ್ ಗಳು ಮಾತ್ರ ಸಿಗಲಿವೆ. ಅಲ್ಲದೆ, ಫೋನ್ ಪೇ ಮೂಲಕ ಹಣ ಪಾವತಿಸಿದರೆ ಕೇವಲ 1,500 ಪಾಯಿಂಟ್ಸ್ ನೀಡಲಾಗುತ್ತದೆ ಎಂದು ಎಸ್ ಬಿಐ ತಿಳಿಸಿದೆ. ಫೋನ್ ಪೇ ಎಸ್ ಬಿಐ ಕಾರ್ಡ್ ಪರ್ಪಲ್ ಕಾರ್ಡ್ ಹೊಂದಿರುವವರಿಗೆ ವರ್ಷಕ್ಕೆ 1 ಸಾವಿರ ರಿವಾರ್ಡ್ ಪಾಯಿಂಟ್ ಗಳ ಬದಲಾಗಿ ಕೇವಲ 750 ಪಾಯಿಂಟ್ ಗಳು ಮಾತ್ರ ಲಭಿಸಲಿವೆ.
ಇವುಗಳ ಜತೆಗೆ, ಕೆಲವು ಪೇಮೆಂಟ್ ಗಳನ್ನು ಮಾಡಿದಾಗ ಲಭಿಸುವ ರಿವಾರ್ಡ್ ಪಾಯಿಂಟ್ ಗಳನ್ನು ನೀಡುವುದಿಲ್ಲ ಎಂದು ಎಸ್ ಬಿಐ ತಿಳಿಸಿದೆ. ಮಕ್ಕಳ ಶಾಲೆ-ಕಾಲೇಜು ಫೀಸ್, ಟೋಲ್ ಶುಲ್ಕಗಳು, ಚಿನ್ನಾಭರಣ ಖರೀದಿ, ಯುಟಿಲಿಟಿ ಬಿಲ್ ಪೇಮೆಂಟ್, ಫೋನ್ ಪೇ ಹೊರತಾದ ಆ್ಯಪ್ ಗಳ ಮೂಲಕ ವಿಮಾ ಪ್ರೀಮಿಯಂ ಪಾವತಿ, ಯುಪಿಐ ಪಾವತಿ ಮಾಡಿದವರಿಗೆ ರಿವಾರ್ಡ್ ಪಾಯಿಂಟ್ ಲಭಿಸುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ ; ಎಂಎಸ್ಸಿ ಮುಗಿಸಿದವರಿಗೆ ಒಳ್ಳೆಯ ಅವಕಾಶ : ಬೆಂಗಳೂರಿನಲ್ಲಿರುವ ಕೃಷಿ ಇಲಾಖೆಯಲ್ಲಿ ನೇಮಕಾತಿ!



















