ಬೆಂಗಳೂರು : ಕರ್ನಾಟಕ ಸರ್ಕಾರ ಸಂಸ್ಥೆಯಲ್ಲಿ ಉದ್ಯೋಗ ಪಡೆಯಬೇಕು ಎನ್ನುವವರಿಗೆ ಸಿಹಿ ಸುದ್ದಿ ದೊರೆತಿದೆ. ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ (RDPR Karnataka Recruitment 2026) ಖಾಲಿ ಇರುವ 4 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಮ್ಯಾನೇಜರ್ ಸೇರಿ ಹಲವು ಹುದ್ದೆಗಳ ಭರ್ತಿಗೆ ಆಫ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಹುದ್ದೆಯ ಹೆಸರು: ಮ್ಯಾನೇಜರ್ ಇತ್ಯಾದಿ
ಹುದ್ದೆಗಳ ಸಂಖ್ಯೆ: 4
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 30
ಒಂದು ಮ್ಯಾನೇಜರ್, ಒಂದು ಫಸ್ಟ್ ಕ್ಲಾಸ್ ಅಸಿಸ್ಟಂಟ್ ಹಾಗೂ ಎರಡು ಅಕೌಂಟ್ಸ್ ಅಸಿಸ್ಟಂಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಿಂದ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಸುವವರಿಗೆ ಯಾವುದೇ ಶುಲ್ಕ ನಿಗದಿಪಡಿಸಿಲ್ಲ. ಗರಿಷ್ಠ 62 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಮಾಸಿಕ 28 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ. https://rdpr.karnataka.gov.in/ ಗೆ ಭೇಟಿ ನೀಡಿ, ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ
Director, Directorate of Social Research, First Floor, Abhaya Complex, Kolageri Development Board Building, No.55, Risaldar Road, Seshadripuram, Bangalore- 560020.
ಇದನ್ನೂ ಓದಿ : ಪಿಚ್ ಮಧ್ಯೆ ಓಡಿ ಪ್ರಮಾದವೆಸಗಿದ ವಿಪ್ರಜ್ ನಿಗಮ್ : ಶ್ರೀಲಂಕಾ ‘ಎ’ ವಿರುದ್ಧ ಭಾರತ ‘ಎ’ ತಂಡಕ್ಕೆ 10 ರನ್ ದಂಡ!



















