ಹೆಮ್ಮಾಡಿ : ಹೊಸಕಳಿ ಜಾಲಾಡಿಯ ಶ್ರೀ ನಾಗ, ನಾಗಯಕ್ಷಿ ಜಟ್ಟಿಗೇಶ್ವರ ಹಾಗೂ ಸಪರಿವಾರ ದೈವಸ್ಥಾನದಲ್ಲಿ 17ನೇ ವರ್ಷದ ವರ್ಧಂತ್ಯೋತ್ಸವವು ಮೇ 17 ಮತ್ತು 18 ರಂದು ಭಕ್ತಿ ಭಾವದಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಭ್ರಮದಿಂದ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ಶ್ರೀ ವೆ. ಮೂ. ಗಜೇಂದ್ರ ಹೊಳ್ಳ ಜಾಲಾಡಿ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಭಕ್ತಿ, ನಂಬಿಕೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಭಕ್ತರು ಒಗ್ಗಟ್ಟಿನಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ನಾಗ, ನಾಗಯಕ್ಷಿ, ಜಟ್ಟಿಗೇಶ್ವರ ಹಾಗೂ ಸಪರಿವಾರ ದೇವಸ್ಥಾನ ಜಾಲಾಡಿ, ಹೊಸಕಳಿ ಇದರ ಅಧ್ಯಕ್ಷ ಉದಯ್ ದೇವಾಡಿಗ ಮಾತನಾಡಿ, 17ನೇ ವರ್ಷದ ವರ್ಧಂತ್ಯೋತ್ಸವವನ್ನು ಯಶಸ್ವಿಯಾಗಿ ನಡೆಸಲು ಭಕ್ತರು, ದಾನಿಗಳು ಹಾಗೂ ಗ್ರಾಮಸ್ಥರು ನೀಡಿದ ಸಹಕಾರ ಅತ್ಯಂತ ಶ್ಲಾಘನೀಯವಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಭಕ್ತಿ, ಐಕ್ಯತೆ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮುಂದಿನ ದಿನಗಳಲ್ಲಿಯೂ ಎಲ್ಲರ ಸಹಕಾರ ಇದೇ ರೀತಿ ಇರಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ ದಾನಿಗಳು, ಸಮಾಜ ಸೇವಕ ಬೆಂಕಿಮಣಿ ಸಂತು ಹಾಗೂ ಯೋಗ ಪಟು ತನ್ವಿತಾ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ದೇವಾಡಿಗ ಕಂದಾಯ ನಿರೀಕ್ಷಕರು ವಂಡ್ಸೆ, ರಾಘವೇಂದ್ರ ಚರಣ್ ನಾವಡ ವಕೀಲರು ಕುಂದಾಪುರ, ರಾಘವೇಂದ್ರ ಕುಲಾಲ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಗತಿ ಮಹಿಳಾ ಸಹಕಾರಿ ಸಂಘ ನಿ. ಹೆಮ್ಮಾಡಿ, ರತನ್ ರಮೇಶ್ ಪೂಜಾರಿ, ರಮೇಶ್ ಪೂಜಾರಿ ಉಪ ಪ್ರಾಂಶುಪಾಲರು ಜನತಾ ಪಿಯು ಕಾಲೇಜು ಹೆಮ್ಮಾಡಿ, ವಿಜಯ್ ಪೂಜಾರಿ ಉದ್ಯಮಿಗಳು ಹೋಟೆಲ್ ಶ್ರೀ ಕೃಷ್ಣ ವೈಭವ ಬೆಂಗಳೂರು, ಕಿರಣ್ ದೇವಾಡಿಗ ಉದ್ಯಮಿಗಳು ಶಾಂತಲಾ ಪೌಲ್ಟ್ರಿ ಫಾರಂ ಜಾಲಾಡಿ, ತೇಜ ದೇವಾಡಿಗ ಸ್ಥಾಪಕಾಧ್ಯಕ್ಷರು JCC ಕ್ರಿಕೆಟ್ ಕ್ಲಬ್ ಜಾಲಾಡಿ, ಸಚ್ಚಿದ್ರ ದೇವಾಡಿಗ ಮಾಜಿ ಗ್ರಾಮಪಂಚಾಯಿತಿ ಸದಸ್ಯರು ಕಟ್ಬೇಲ್ತೂರು ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಿರಣ್ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಇದನ್ನೂ ಓದಿ : ಹಸಿರು ಇಂಧನದತ್ತ ಮಹತ್ವದ ಹೆಜ್ಜೆ : ಇ22 ರಿಂದ ಇ30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಗುಣಮಟ್ಟ ನಿಗದಿಪಡಿಸಿದ ಕೇಂದ್ರ!



















