ಕಲಬುರಗಿ : ಜಿಲ್ಲೆಯ ವಿವಿಧೆಡೆ ನಿನ್ನೆ ಬಿರುಗಾಳಿ, ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಸೇಡಂ ತಾಲೂಕಿನ ತೆಲಂಗಾಣ ಗಡಿ ಭಾಗದ ಪಿಲ್ಲಿಗುಂಟಾ ತಾಂಡಾದಲ್ಲಿ ಸಿಡಿಲು ಬಡಿದು 25 ಮೇಕೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೀರಾ ನಾಯಕ್, ದೇವ್ಲಾ ನಾಯಕ್ ಹಾಗೂ ಬಿಕ್ಯಾನಾಯಕ್ ಅವರಿಗೆ ಸೇರಿದ್ದ ಮೇಕೆಗಳು ತಾಂಡಾ ಸಮೀಪ ಮೇಯುತ್ತಿದ್ದ ವೇಳೆ ಏಕಾಏಕಿ ಮಿಂಚು-ಗುಡುಗು ಸಹಿತ ಮಳೆ ಆರಂಭವಾಗಿದೆ. ಈ ವೇಳೆ ಬಿದ್ದ ಸಿಡಿಲಿನ ಹೊಡೆತಕ್ಕೆ ಒಂದೇ ಬಾರಿ 25 ಮೇಕೆಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಶುಸಂಗೋಪನೆ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮೇಕೆಗಳ ಮೌಲ್ಯ ಅಂದಾಜು ಮಾಡಲಾಗುತ್ತಿದ್ದು, ಸರ್ಕಾರದಿಂದ ಪರಿಹಾರ ನೀಡುವ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಭಾರೀ ಮಳೆ ಹಾಗೂ ಸಿಡಿಲಿನ ಪರಿಣಾಮ ತಾಂಡಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರೈತರು ಮತ್ತು ಪಶುಪಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ : ಕೇಂದ್ರದ PMVBRY ಯೋಜನೆಯ 15 ಸಾವಿರ ರೂ. ಪಡೆಯಲು ಫೇಸ್ ಅಥೆಂಟಿಕೇಶನ್ ಕಡ್ಡಾಯ : ಹೀಗೆ ಮಾಡಿ


















