ಉಡುಪಿ : ಸಮೃದ್ಧ ಬೈಂದೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ತಾಲೂಕು, NNO ಕಮ್ಯೂನಿಟಿ ಸೆಂಟರ್ ಕುಂದಾಪುರ, ಜೋಗಿ ಮನೆ ಟ್ರಸ್ಟ್ ಹಳಗೇರಿ, ಲಯನ್ಸ್ ಕ್ಲಬ್ ಉಪ್ಪುಂದ ಬೈಂದೂರು ಹಾಗೂ ಸರ್ಕಾರಿ ಪ್ರೌಢ ಶಾಲೆ ಕಿರಿಮಂಜೇಶ್ವರ ಇವರ ಸಹಯೋಗದಲ್ಲಿ ಪ್ರೇರಣಾಭಿನಂದನೆ ಕಾರ್ಯಕ್ರಮವು ಸರ್ಕಾರಿ ಪ್ರೌಢ ಶಾಲೆ ಕಿರಿಮಂಜೇಶ್ವರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಲವು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ಪ್ರೇರಣಾ ಶಿಬಿರವು ವಿದ್ಯಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ. ಶಿಬಿರದಿಂದ ಪ್ರೇರಣೆ ಪಡೆದು ಉತ್ತಮ ಅಂಕ ಗಳಿಸಿದ ಪ್ರತಿ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.

ಜೋಗಿ ಮನೆ ಟ್ರಸ್ಟ್ ಅಧ್ಯಕ್ಷರಾದ ವಸಂತ ಜೋಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮತ್ತು ಸಂಸ್ಕಾರದ ಮಹತ್ವ ಅಪಾರವಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದ್ದು, ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಉತ್ತಮ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಎ. ಶಂಕರ ಐತಾಳ ಅಧ್ಯಕ್ಷರು, ಗೀತ HSN Foundation (ರಿ.) ಕೋಟೇಶ್ವರದ ಸುಮಾ ಆಚಾರ್ ನೇತೃತ್ವದಲ್ಲಿ ಪ್ರೇರಣಾ ಟ್ರಸ್ಟ್ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಜನಜಾಗೃತಿ ವೇದಿಕೆ ಬೈಂದೂರು ತಾಲೂಕಿನ ಅಧ್ಯಕ್ಷರಾದ ಸುಧಾಕರ ಆಚಾರ್ಯ ತ್ರಾಸಿ, ಬೈಂದೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ, NNO ಕಮ್ಯೂನಿಟಿ ಸೆಂಟರ್ ಕುಂದಾಪುರದ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಉಮೇಶ್ ನಾಯರಿ, ಸರ್ಕಾರಿ ಪ್ರೌಢಶಾಲೆ ಕಿರಿಮಂಜೇಶ್ವರದ ಮುಖ್ಯ ಶಿಕ್ಷಕರಾದ ಮಂಜು ಎಂ ಪೂಜಾರಿ, ಲಯನ್ಸ್ ಕ್ಲಬ್ ಉಪ್ಪುಂದ ಬೈಂದೂರಿನ ಅಧ್ಯಕ್ಷ ಉದಯ ಡಿ.ಆರ್ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ್ ಖಾರ್ವಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕರಾದ ಸುಮಾ ಆಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ರಾಯಭಾರಿ SNR ಹುಸೈನ್ ಹೈಕಾಡಿ ವಂದಿಸಿದರು.
ಇದನ್ನೂ ಓದಿ : ಪ್ರವಾಸಿಗರೇ ಗಮನಿಸಿ ; ಸೈಂಟ್‌ಮೇರೀಸ್ ದ್ವೀಪ ಪ್ರವೇಶ, ಮಲ್ಪೆ ಬೀಚ್‌ನಲ್ಲಿ ಜಲಸಾಹಸ ಕ್ರೀಡೆಗಳಿಗೆ ನಿರ್ಬಂಧ!


















