ಬೆಂಗಳೂರು : ಗ್ಲಾಸ್ ಏರಿಸಿಕೊಂಡು ಎಸಿ ಹಾಕಿಕೊಂಡು ಕಾರಿನಲ್ಲಿ ಮಲಗಿದ್ದ ಚಾಲಕ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಪೀಣ್ಯ ಬಳಿ ನೆಲಗೆದರಹಳ್ಳಿಯಲ್ಲಿ ನಡೆದಿದೆ. ಸುನಿತ್ ಹೆಚ್.ಬಿ (38) ಮೃತಪಟ್ಟಿರುವ ವ್ಯಕ್ತಿ.
ನಿನ್ನೆ ಬೆಳಗ್ಗೆ ಸುಮಾರು 10 ಗಂಟೆಗೆ ಖಾಸಗಿ ಕಂಪನಿಯೊಂದರ ಕಾರು ಚಾಲಕ ಸುನಿತ್ ರಸ್ತೆ ಪಕ್ಕ ಕಾರು ನಿಲ್ಲಿಸಿ, ಎಲ್ಲಾ ಕಿಟಕಿಗಳನ್ನು ಏರಿಸಿ AC ಹಾಕಿಕೊಂಡು ಮಲಗಿದ್ದರು. ತುಂಬಾ ಹೊತ್ತು ಕಾರು ಅದೇ ಸ್ಥಳದಲ್ಲಿ ನಿಂತಿದ್ದರಿಂದ ಅನುಮಾನಗೊಂಡ ಸಾರ್ವಜನಿಕರು ಕಾರಿನ ಬಳಿ ಹೋಗಿ ಪರಿಶೀಲಿಸಿದ್ದಾರೆ.
ಚಾಲಕ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಕಲ್ಲಿನಿಂದ ಕಿಟಕಿ ಗಾಜು ಒಡೆದು ನೋಡಿದಾಗ, ಕಾರಿನೊಳಗೆ ಚಾಲಕ ಮೃತಪಟ್ಟಿರುವುದು ಪತ್ತೆಯಾಗಿದೆ. ತಕ್ಷಣ ಪೀಣ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಇದನ್ನೂ ಓದಿ : ಗುಡುಗು ಸಿಡಿಲಿನ ಆರ್ಭಟಕ್ಕೆ ಹೃದಯಾಘಾತವಾಗಿ ಶಿಕ್ಷಕ ಸಾವು!


















