ಬೆಂಗಳೂರು : ನೀವೇನಾದರೂ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ನಿಮ್ಮ ಜಿಲ್ಲೆಯಲ್ಲಿಯೇ ಉದ್ಯೋಗ ಹುಡುಕುತ್ತಿದ್ದರೆ ನಿಮಗೊಂದು ಸಿಹಿ ಸುದ್ದಿ ಇದೆ. ಕರ್ನಾಟಕದ ಸುರತ್ಕಲ್ ನಲ್ಲಿರುವ, ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (NIT Karnataka Recruitment 2025) ಖಾಲಿ ಇರುವ 84 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. 84 ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ
ಹುದ್ದೆಗಳ ಹೆಸರು: ಪ್ರೊಫೆಸರ್
ಒಟ್ಟು ಹುದ್ದೆಗಳು: 84
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 2
ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್
ಉದ್ಯೋಗ ಸ್ಥಳ: ಸುರತ್ಕಲ್, ಕರ್ನಾಟಕ
82 ಅಸಿಸ್ಟಂಟ್ ಪ್ರೊಫೆಸರ್, 1 ಅಸೋಸಿಯೇಟ್ ಪ್ರೊಫೆಸರ್ ಹಾಗೂ 1 ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ಬಯಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಬಿಎಸ್ಸಿ, ಬಿಇ, ಬಿಟೆಕ್, ಎಂ.ಇ, ಎಂ.ಟೆಕ್, ಎಂಎಸ್ಸಿ, ಪಿಎಚ್.ಡಿ ಮುಗಿಸಿರಬೇಕು ಎಂದು ತಿಳಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಮೊದಲು ಪರಿಶೀಲನೆ ಮಾಡಲಾಗುತ್ತದೆ. ಇದಾದ ಬಳಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ nitk.ac.in ಗೆ ಭೇಟಿ ನೀಡಬೇಕು
ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆ ಓದಿಕೊಳ್ಳಬೇಕು
ಆನ್ ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು
ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು
ಫ್ಯೂಚರ್ ರೆಫರೆನ್ಸಿಗಾಗಿ ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಂಡಿರಬೇಕು
ಇದನ್ನೂ ಓದಿ : ಮಿಡ್‌ನೈಟ್ ಬಸ್ ಸ್ಟ್ಯಾಂಡಲ್ಲಿ ಮಾರುವೇಷದಲ್ಲಿ ನಿಂತ ಮಹಿಳಾ IPS ಅಧಿಕಾರಿ : ಅಸಭ್ಯವಾಗಿ ವರ್ತಿಸಿದ 40 ಕಾಮುಕರು!



















