ಬೆಂಗಳೂರು : ಈ ಬಾರಿಯ ತೀವ್ರ ಬೇಸಿಗೆಯಿಂದಾಗಿ ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಯೊಂದಿಗೆ ಹೋಲಿಸಿದರೆ ಅನೇಕ ಪ್ರಮುಖ ಜಲಾಶಯಗಳಲ್ಲಿ ಶೆಕಡಾ 50ರಷ್ಟು ನೀರಿನ ಮಟ್ಟ ಕಡಿಮೆಯಾಗಿದೆ ಎಂಬುದು ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.
ಪ್ರಮುಖ ಅಣೆಕಟ್ಟುಗಳ ನೀರಿನ ಸಂಗ್ರಹ ವಿವರ ಹೀಗಿದೆ:
- ಲಿಂಗನಮಕ್ಕಿ ಅಣೆಕಟ್ಟು : ಒಟ್ಟು ಸಾಮರ್ಥ್ಯ 151.75 ಟಿಎಂಸಿ ಇದ್ದು, ಪ್ರಸ್ತುತ 37.83 ಟಿಎಂಸಿ ಮಾತ್ರ ಉಳಿದಿದೆ. ಕಳೆದ ವರ್ಷ ಇದೇ ವೇಳೆಗೆ 44.03 ಟಿಎಂಸಿ ನೀರು ಸಂಗ್ರಹವಾಗಿತ್ತು.
- ಸುಪಾ ಅಣೆಕಟ್ಟು : 145.33 ಟಿಎಂಸಿ ಸಾಮರ್ಥ್ಯದಲ್ಲಿ ಈಗ 43.99 ಟಿಎಂಸಿ ಇದ್ದು, ಕಳೆದ ವರ್ಷ 53.39 ಟಿಎಂಸಿ ಇತ್ತು.
- ವರಾಹಿ : 30.55 ಟಿಎಂಸಿ ಸಾಮರ್ಥ್ಯದಲ್ಲಿ ಈಗ 8.66 ಟಿಎಂಸಿ, ಕಳೆದ ವರ್ಷ 10.03 ಟಿಎಂಸಿ.
- ಹಾರಂಗಿ : 8.50 ಟಿಎಂಸಿ ಸಾಮರ್ಥ್ಯದಲ್ಲಿ 3.21 ಟಿಎಂಸಿ (ಕಳೆದ ವರ್ಷ 3.44 ಟಿಎಂಸಿ).
- ಹೇಮಾವತಿ : 37.10 ಟಿಎಂಸಿ ಸಾಮರ್ಥ್ಯದಲ್ಲಿ 17.53 ಟಿಎಂಸಿ (ಕಳೆದ ವರ್ಷ 19.20 ಟಿಎಂಸಿ).
- ಕೆಆರ್‌ಎಸ್ : 49.45 ಟಿಎಂಸಿ ಸಾಮರ್ಥ್ಯದಲ್ಲಿ 18.90 ಟಿಎಂಸಿ (ಕಳೆದ ವರ್ಷ 19.83 ಟಿಎಂಸಿ).
- ಕಬಿನಿ : 19.52 ಟಿಎಂಸಿ ಸಾಮರ್ಥ್ಯದಲ್ಲಿ 6.59 ಟಿಎಂಸಿ (ಕಳೆದ ವರ್ಷ 9.32 ಟಿಎಂಸಿ).
ಕೆಲವು ಅಣೆಕಟ್ಟುಗಳಲ್ಲಿ ಸ್ವಲ್ಪ ಮಟ್ಟಿನ ಏರಿಕೆ :
- ಭದ್ರಾ: 31.89 ಟಿಎಂಸಿ (ಕಳೆದ ವರ್ಷ 30.54 ಟಿಎಂಸಿ).
- ತುಂಗಭದ್ರಾ: 11.23 ಟಿಎಂಸಿ (ಕಳೆದ ವರ್ಷ 6.88 ಟಿಎಂಸಿ).
- ಆಲಮಟ್ಟಿ: 30.29 ಟಿಎಂಸಿ (ಕಳೆದ ವರ್ಷ 25.62 ಟಿಎಂಸಿ).
- ಇನ್ನೂ ಕೆಲವು ಜಲಾಶಯಗಳಲ್ಲಿ ಕುಸಿತ ಮುಂದುವರಿದಿದೆ.
- ಘಟಪ್ರಭಾ: 14.01 ಟಿಎಂಸಿ (ಕಳೆದ ವರ್ಷ 17.32 ಟಿಎಂಸಿ)
- ಮಲಪ್ರಭಾ: 11.03 ಟಿಎಂಸಿ (ಕಳೆದ ವರ್ಷ 13.21 ಟಿಎಂಸಿ)
- ವಾಣಿವಿಲಾಸ ಸಾಗರ: 26.78 ಟಿಎಂಸಿ (ಕಳೆದ ವರ್ಷ 27.82 ಟಿಎಂಸಿ)
ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಕುಡಿಯುವ ನೀರು ಹಾಗೂ ಕೃಷಿ ನೀರಿನ ಪೂರೈಕೆಯ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ಮಳೆಯ ಮುಂಗಾರು ವಿಳಂಬವಾದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕವೂ ವ್ಯಕ್ತವಾಗುತ್ತಿದೆ. ನಿರೀಕ್ಷೆ ಮಳೆಗಾಲದ ಮೇಲೆ ಈ ಹಿನ್ನೆಲೆಯಲ್ಲಿ ಎಲ್ಲರ ಗಮನ ಇದೀಗ ಮುಂಗಾರು ಮಳೆಯ ಮೇಲೆ ನೆಟ್ಟಿದೆ. ಸಮರ್ಪಕ ಮಳೆಯಾದರೆ ಮಾತ್ರ ಜಲಾಶಯಗಳ ಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ : ಅಪ್ರಾಪ್ತ ಮಕ್ಕಳ ಮೇಲೆ ಕಾಂಗ್ರೆಸ್ ಮುಖಂಡನಿಂದ ಮಾರಣಾಂತಿಕ ಹಲ್ಲೆ – ಕೇಸ್ ದಾಖಲು


















