ಬೆಳಗಾವಿ : ಹಾವು ಇಲ್ಲದ ಜಾಗವೇ ಇಲ್ಲ ಎಂಬ ಹಿರಿಯರ ಮಾತು ಮತ್ತೆ ಸತ್ಯವಾಗಿದೆಯೆನ್ನಿಸುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ.
ಭೂಮಿ ಉಳುಮೆ ಮಾಡಲು ತೆರಳಿದ್ದ ರೈತನ ಟ್ರಾಕ್ಟರ್‌ನಲ್ಲಿ ಅಚ್ಚರಿಯ ಘಟನೆ ನಡೆದಿದೆ. ರಾಮಚಂದ್ರ ಪಾಟೀಲ ಅವರಿಗೆ ಸೇರಿದ ಗದ್ದೆಯಲ್ಲಿ ಸಂತೂಷ್ ಎಂಬವರು ಟ್ರಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದಾಗ, ಅಚಾನಕ್ ಆಗಿ ಟ್ರಾಕ್ಟರ್ ಸೀಟಿನ ಕೆಳಭಾಗದಲ್ಲಿ ಹಾವು ಕಾಣಿಸಿಕೊಂಡಿದೆ. ಇನ್ನೂ ವಿಚಿತ್ರ ಅಂದ್ರೆ, ಆ ಹಾವು ಚಾಲಕನ ಸೀಟ್ ಬಳಿ ಆರಾಮವಾಗಿ ಕುಳಿತಿತ್ತು. ಇದನ್ನು ಕಂಡ ಚಾಲಕ ಗಾಬರಿಯಿಂದ ತಕ್ಷಣವೇ ಟ್ರಾಕ್ಟರ್‌ನಿಂದ ಕೆಳಗಿಳಿದು ಓಡಿದ್ದಾನೆ. ಬಳಿಕ ಸ್ಥಳೀಯ ಉರಗ ರಕ್ಷಕರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕರು ಟ್ರಾಕ್ಟರ್ ಸೀಟ್ ಬಿಚ್ಚಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇದು “ಕ್ಯಾಟ್/ಕ್ಯಾರಿ ಹಾವು” (ವಿಷರಹಿತ ಜಾತಿ) ಆಗಿರುವುದರಿಂದ ಯಾವುದೇ ಅಪಾಯ ಇಲ್ಲ ಎಂದು ರಕ್ಷಕ ನಿಖಿಲ್ ತಿಳಿಸಿದ್ದಾರೆ. ನಂತರ ಹಾವನ್ನು ಮಹಾರಾಷ್ಟ್ರದ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ.
ಇದನ್ನೂ ಓದಿ : ಚಮಕ್ ತೋರಿಸಲು ಹೋಗಿ ಆಕ್ಸಿಡೆಂಟ್..? ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು



















