ಬೆಳಗಾವಿ : ,ಮಾಜಿ ಸಂಸದ ಜಿಎಂ ಸಿದ್ದೇಶ್ವರ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧ ಬೆಳಗಾವಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2025-26ನೇ ಸಾಲಿನ ಕಬ್ಬಿನ ಬಾಕಿ ಬಿಲ್ ಕೊಡೊದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಸುತ್ತಲಿನ ಗ್ರಾಮದ ರೈತರು ಆರೋಪಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿರುವ ಜಿಎಂ ಶುಗರ್ ಮತ್ತು ಎನರ್ಜಿ ನಿಯಮಿತ ತುಮ್ಮಿನಕಟ್ಟಿ ಕಾರ್ಖಾನೆ ವಿರುದ್ಧ ಆರೋಪ ಕೇಳಿ ಬಂದಿದ್ದು, ಖಾನಾಪುರ ತಾಲೂಕಿನ 50ಕ್ಕೂ ಹೆಚ್ಚು ರೈತರು 4ಸಾವಿರಕ್ಕೂ ಹೆಚ್ಚು ಟನ್ ಕಟಾವು ಮಾಡಿ, ಕಾರ್ಖಾನೆ ರವಾನೆ ಮಾಡಿದ್ದಾರೆ. ಅಂದಾಜು 4ರಿಂದ 5ಕೋಟಿ ರೂಪಾಯಿ ಮೌಲ್ಯದ ಕಬ್ಬು ರವಾನೆ ಮಾಡಲಾಗಿದ್ದು, ಕಬ್ಬು ಕಟಾವು ನಡೆಸಿ15ದಿನಗಳೊಗೆ ಬಿಲ್ ಕೊಡೊದಾಗಿ ಭರವಸೆ ನೀಡಿ ಕಾರ್ಖಾನೆಗೆ ಕಬ್ಬು ಒಯ್ದಿದ್ದರು.
ಇದೀಗ ಕಬ್ಬಿನ ಬಿಲ್ ಕೊಡೊದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನಮ್ಮ ಹಣ ಕೊಡಿಸಿ ಎಂದು ದಾವಣಗೆರೆ ಡಿಸಿ, ಮಾಜಿ ಸಂಸದ ಜಿಎಂ ಸಿದ್ದೇಶ್ವರಗೆ ಮನವಿ ಮಾಡಿದ್ದಾರೆ. ನಮ್ಮ ಬಿಲ್ ಕೊಡದೇ ಇದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ : ರಾಯಚೂರಲ್ಲಿ ಲವ್.. ಸೆಕ್ಸ್.. ದೋಖಾ..! ಮದುವೆ ಆಗುವುದಾಗಿ ನಂಬಿಸಿ ಯುವತಿಗೆ ಮೋಸ



















