ಬೆಂಗಳೂರು: ಬೆಂಗಳೂರಿನಲ್ಲೊಂದು ಮನ ಕಲುಕುವಂತಹ ಘಟನೆ ಒಂದು ಬೆಳಕಿಗೆ ಬಂದಿದೆ. ವೃದ್ಧ ತಾಯಿಯನ್ನು ಸಾಕಬೇಕೆಂದು ತಾಯಿಯ ಮೇಲೆಯೇ ಮಕ್ಕಳು ಮತ್ತು ಮೊಮ್ಮಕ್ಕಳು ಮಾರಣಾಂತಿಕ ಹಲ್ಲೆ ಆರೋಪ ಕೇಳಿಬಂದಿದೆ.
ಗೌರಮ್ಮ ಹಲ್ಲೆಗೊಳಗಾದ ತಾಯಿ. ತಾಯಿಯನ್ನು ಸಾಕಲು ಸಾಧ್ಯವಿಲ್ಲ ಎಂಬ ನೆಪದಲ್ಲಿ ಪುತ್ರರು ಹಲ್ಲೆ ನಡೆಸುತ್ತಿರುವುದಾಗಿ ಆರೋಪಿಸಲಾಗಿದೆ. ಪುತ್ರರಾದ ನಾಗೇಶ್, ಚೇತನ್ ಮತ್ತು ಆಕಾಶ್ ಎಂಬವರು ಲಾಂಗು, ಮಚ್ಚುಗಳಂತಹ ಆಯುಧಗಳನ್ನು ಬಳಸಿಕೊಂಡು ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಜೊತೆಗೆ, ಮೊಮ್ಮಕ್ಕಳು ಕೂಡ ಮಚ್ಚು-ಲಾಂಗು ಹಿಡಿದು ರೀಲ್ಸ್ ಮಾಡುತ್ತಾ ವೃದ್ಧೆಯನ್ನು ಭಯಭೀತಳನ್ನಾಗಿಸುತ್ತಿರುವ ಆರೋಪ ಕೇಳಿಬಂದಿದೆ.
ಇದಲ್ಲದೆ, ರೌಡಿಶೀಟರ್ ಸಂಪರ್ಕ ಹೊಂದಿರುವ ವ್ಯಕ್ತಿಗಳ ಜೊತೆಗೂಡಿ ಅಜ್ಜಿಯ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ದೌರ್ಜನ್ಯದಿಂದ ಬೇಸತ್ತ ಗೌರಮ್ಮ ಅವರು ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ಸಂಬಂಧ ದೂರದ ಸಂಬಂಧಿ ಹಾಗೂ ವಕೀಲ ಕೇಶವ್ ಅವರ ಮೂಲಕ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ : ಕರೆಂಟ್ ಹೊಡೆಯುತ್ತಾ ಇಲ್ವಾ? ಈ ಚಾಲಾಕಿ ಕಾಡಾನೆ ತಂತಿ ಬೇಲಿ ದಾಟಿದ ಸ್ಟೈಲೇ ಬೇರೆ!



















