ಬೆಂಗಳೂರು : ಬೆಂಗಳೂರಿನ ಕೊಡುಗೆಹಳ್ಳಿ ಪ್ರದೇಶದಲ್ಲಿ ಸಾಕು ನಾಯಿಯ ಮೇಲೆ ಕ್ರೌರ್ಯ ತೋರಿದ ಘಟನೆ ಬೆಳಕಿಗೆ ಬಂದಿದೆ. ಕೃಷ್ಣಪ್ರಸಾದ್ ಎಂಬ ವ್ಯಕ್ತಿ, ಹಸ್ಕಿ ಜಾತಿಗೆ ಸೇರಿದ ಸಾಕು ನಾಯಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದ್ದು, ವಿಳಾಸದ ಸಮೇತ ಮಾಹಿತಿ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಈ ಕುರಿತು ಪಶುಪಾಲನಾ ಇಲಾಖೆ ಕೂಡ ಕ್ರಮಕ್ಕೆ ಮುಂದಾಗಿದೆ. ಇಲಾಖೆಯಿಂದ ಕೊಡುಗೆಹಳ್ಳಿ ಪೊಲೀಸ್ ಠಾಣೆ ಗೆ ಪತ್ರ ಬರೆದು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ.
ಪ್ರಾಣಿ ಹಿಂಸೆ ವಿರುದ್ಧ ಜಾರಿಗೆ ಇರುವ Prevention of Cruelty to Animals Act 1960 ಅಡಿಯಲ್ಲಿ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.



















