ಚಾಮರಾಜನಗರ : ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅಪರೂಪದ ಅನುಭವ ಸಿಕ್ಕಿದ್ದು, ಮರಿಗಳೊಟ್ಟಿಗೆ ಹುಲಿ ದರ್ಶನ ನೀಡಿ ಮನಸೆಳೆದ ಘಟನೆ ಮೂರ್ಕೆರೆ ಸಫಾರಿ ವಲಯದಲ್ಲಿ ನಡೆದಿದೆ.
ಸಫಾರಿಗೆ ತೆರಳಿದ್ದವರಿಗೆ ಮೂರ್ಕೆರೆ ಸಮೀಪ ಮಾರ್ಗ ಮಧ್ಯದಲ್ಲೇ ಎರಡು ಮರಿಗಳೊಂದಿಗೆ ಹುಲಿ ನಿರ್ಭೀತಿಯಾಗಿ ಸಂಚರಿಸುತ್ತಿರುವ ದೃಶ್ಯ ಕಂಡುಬಂದಿದೆ. ಸಫಾರಿ ವಾಹನದ ಸನಿಹದಲ್ಲೇ ಸುಮಾರು ಹತ್ತು ನಿಮಿಷಗಳ ಕಾಲ ಹುಲಿ ಹಾಗೂ ಅದರ ಮರಿಗಳು ಸಂಚರಿಸಿದ್ದು, ಈ ಅಪರೂಪದ ಕ್ಷಣವನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.
ನೀರು ಕುಡಿಯುತ್ತಲಿದ್ದ ಹುಲಿಯ ಮನಮೋಹಕ ದೃಶ್ಯಾವಳಿಯನ್ನು ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹುಲಿ ಮತ್ತು ಅದರ ಮರಿಗಳ ನೈಸರ್ಗಿಕ ಸಂಚಾರವನ್ನು ಕಣ್ಣಾರೆ ಕಂಡ ಪ್ರವಾಸಿಗರು ಫುಲ್ ಖುಷಿಯಾಗಿದ್ದು, ಬಂಡೀಪುರ ಸಫಾರಿಗೆ ಮತ್ತಷ್ಟು ಆಕರ್ಷಣೆ ಹೆಚ್ಚಿಸಿದೆ.
ಇದನ್ನೂ ಓದಿ : ಟ್ರೆಕ್ಕಿಂಗ್ ತೆರಳಿದ್ದ ಯುವತಿ ನಾಪತ್ತೆ ಕೇಸ್ – 4 ದಿನ ಕಳೆದರೂ ಪತ್ತೆಯಾಗದ ಶರಣ್ಯ



















