ಬೆಂಗಳೂರು : ಒಂದುಕಡೆ ರಾಜ್ಯದಲ್ಲಿ ಗ್ಯಾಸ್ ಸಿಗುತ್ತಿಲ್ಲ ಎಂದು ಆಟೋ ಚಾಲಕರು ಪರದಾಡುತ್ತಿದ್ದು, ಬಂಕ್‌ಗಳ ಮುಂದೆ ರಾತ್ರಿಯಿಡೀ ಕ್ಯೂ ನಿಲ್ಲುತ್ತಿದ್ದಾರೆ. ಮತ್ತೊಂದು ಕಡೆ ನಮ್ಮ ಜನಪ್ರತಿನಿಧಿಗಳ ಮೋಜು-ಮಸ್ತಿಗೆ ಮಾತ್ರ ಬರ ಇಲ್ಲ ಎಂಬತಾಗಿದೆ. ಹೌದು.. ಐಪಿಎಲ್ ಟಿಕೆಟ್ ಪಡೆಯೋಕೆ ತಮ್ಮ ಪಿಎಗಳನ್ನೇ ಶಾಸಕರು ಕ್ಯೂ ನಿಲ್ಲಿಸಿದ್ದಾರೆ.
ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ಕೊಡುವ ಮಾತುಕತೆ ಸರ್ಕಾರ-ಕೆಎಸ್‌ಸಿಎ (KSCA) ಮಧ್ಯೆ ಆಗಿದೆ. ನಾಳೆ ಬೆಂಗಳೂರು ಮತ್ತು ಚೆನೈ (RCB vs CSK) ಪಂದ್ಯವಿದೆ. ಈ ಪಂದ್ಯದ ಟಿಕೆಟ್‌ಗಾಗಿ ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಕ್ಯೂ ನಿಂತು ಟಿಕೆಟ್ ಪಡೆಯುತ್ತಿದ್ದಾರೆ.
ಸ್ಪೀಕರ್ ಕಚೇರಿಯಲ್ಲಿ ಟಿಕೆಟ್ ಸಿಗುವುದರಿಂದ ಶಾಸಕರ ಸೂಚನೆ ಮೇರೆಗೆ ಕ್ಯೂ ನಿಂತು ಟಿಕೆಟ್ ಪಡೆಯುತ್ತಿದ್ದಾರೆ. ಜನರ ಸಮಸ್ಯೆ ಕೇಳದ ಜನಪ್ರತಿನಿಧಿಗಳು ಐಪಿಎಲ್ ಟಿಕೆಟ್‌ಗಾಗಿ ಹೀಗೆ ವರ್ತನೆ ತೋರೋದು ಮಾತ್ರ ವಿಪರ್ಯಾಸವೇ ಸರಿ ಎಂದು ಸರ್ವಾಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ – 19 ಜನರ ಬಂಧನ


















