ಬೆಳಗಾವಿ: ಮುಸ್ಲಿಂ ಮತ ಬಿಜೆಪಿಗೆ ಬೇಡ ಎನ್ನುವ ಯತ್ನಾಳ್ ಒಬ್ಬ ಹುಚ್ಚ ಎಂದು ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಎರಡು ಕ್ಷೇತ್ರದಲ್ಲಿ ಉಪಚುನಾವಣೆ ಹಿನ್ನೆಲೆ ಈ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಸೀಫ್ ಸೇಠ್, ಎರಡು ಕಡೆ ನಾವೇ ಗೆಲ್ಲುತ್ತೇವೆ. ಜಿಲ್ಲಾ ಸಚಿವರು ಬಾಗಲಕೋಟೆಯಲ್ಲಿ ಇದ್ದಾರೆ ಎಂದಿದ್ದಾರೆ.
ಇನ್ನು ಈ ವೇಳೆ ಯತ್ನಳ್ ಅವರ ಹೇಳಿಕೆ ಹುರಿತು ಮಾತನಾಡಿದ ಅವರು, ಯತ್ನಾಳ ಒಬ್ಬ ಹುಚ್ಚ ಅವನ ಮಾತು ಏನ್ ಕೇಳತ್ತಿರಾ.
ಇವರ ತಪ್ಪು ಕಲ್ಪನೆಯಿಂದ ದೇಶ ಹಾಳಾಗುತ್ತಿದೆ. ಇವರು ಬೇಡ, ಅವರು ಬೇಡ ಎಂದು ಒಡೆದು ಆಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅವರು ಎಲ್ಲರೂ ಒಗ್ಗಟ್ಟು ಆಗೋಣ ಅಂತ ಹೇಳಬೇಕು, ಅಸೆಂಬ್ಲಿಯಲ್ಲಿ ಒಳ್ಳೇಯ ರೀತಿಯಲ್ಲಿ ಮಾತನಾಡುತ್ತಾರೆ. ಅವರಿಗೆ ಒಳ್ಳೆಯ ಮೆಮೊರಿ ಇದೆ. ಅವರಿಗೆ ಉತ್ತಮ ನಾಯಕನಾಗುವ ಶಕ್ತಿ ಇದೆ. ಆದರೆ ಅವರ ಮಾತಿನಿಂದ ರಾಜ್ಯ, ದೇಶಕ್ಕೆ ನಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್ಟೇಬಲ್ ಕಾರು.. ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!



















