ಉಡುಪಿ : ಚಲಿಸುತ್ತಿದ್ದ ರೈಲಿನಿಂದ ಹೊರ ಜಿಗಿಯಲು ಯತ್ನಿಸುತ್ತಿದ್ದ ಯುವಕನೋರ್ವ ತಪಾಸಣಾಧಿಕಾರಿಯ ಸಮಯಪ್ರಜ್ಞೆಯಿಂದ ಬದುಕುಳಿದ ಘಟನೆ ಉಡುಪಿಯ ಇನ್ನಂಜೆಯಲ್ಲಿ ನಡೆದಿದೆ.
ಕೇರಳದ ಕೊಯಿಕೊಡ್ ನಿವಾಸಿ ಸಹಾದ್ (25) ರಕ್ಷಿಸಲ್ಪಟ್ಟ ಯುವಕ. ಈತ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ತಪಾಸಣಾಧಿಕಾರಿಯನ್ನು ಕಂಡು ರೈಲಿನಿಂದ ಜಿಗಿಯಲು ಯತ್ನಿಸಿದ್ದಾನೆ. ಈ ವೇಳೆ ತಪಾಸಣಾಧಿಕಾರಿ ಬಾಬು, ಯುವಕನನ್ನು ರಕ್ಷಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲು ಇನ್ನಂಜೆ ರೈಲು ನಿಲ್ದಾಣದ ಸಮೀಪ ಬಂದಾಗ ಈ ಘಟನೆ ನಡೆದಿದೆ. ಬಳಿಕ ಬಾಬು ಅವರು ರಕ್ಷಿಸಿದ್ದ ಯುವಕನನ್ನು ಇಂದ್ರಾಳಿಯ ಆರ್ ಪಿಎಫ್ ಕಚೇರಿ ವಶಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಪ್ರಶಸ್ತಿ ಪ್ರಕಟ ; ರಾಜ್ಯದ 6 ಪ್ರಶಸ್ತಿಗಳಲ್ಲಿ 5 ಉಡುಪಿಗೆ



















