ಧಾರವಾಡ : ಇರಾನ್-ಇಸ್ರೇಲ್ ಯುದ್ಧದ ಪರಿಣಾಮದಿಂದ ವಿದ್ಯಾಕಾಶಿ ಧಾರವಾಡದ ಕೋಚಿಂಗ್ ಸೆಂಟರ್‌ಗಳಿಗೂ ಎಲ್‌ಪಿಜಿ ಸಿಲಿಂಡರ್ ಕೊರತೆ ಕಾಡುತ್ತಿದೆ.
ಎಸ್‌ಎಸ್‌ಎಲ್‌ಸಿ, ನವೋದಯ ಸೇರಿ ಹಲವು ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡೋ ಕೇಂದ್ರಗಳಲ್ಲಿ ಮಾಲೀಕರು, ಗ್ರಾಸ್ ಅಭಾವದಿಂದ ಶೇ. 20 ರಷ್ಡು ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು ಇಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಗೆ ಮಾಲೀಕರು ಪರದಾಡುವಂತಾಗಿದ್ದು, ಬೇಡಿಕೆ ಇದ್ದರೂ ವಿದ್ಯಾರ್ಥಿಗಳಿಗೆ ಪ್ರವೇಶ ಮುಕ್ತಾಯದ ಎಂದು ಬೋರ್ಡ್ ಹಾಕಲಾಗಿದೆ. ನಗರದಲ್ಲಿ ಪ್ರತಿವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲಾಗುತ್ತಿತ್ತು.ಆದರೆ ಈ ಬಾರಿ ವಿದ್ಯಾರ್ಥಗಳ ಪ್ರವೇಶಕ್ಕೆ ಹಿಂದೇಟು ಹಾಕುವಂತಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಉಪಹಾರ, ಊಟ ನೀಡಲು ಆಗುತ್ತಿಲ್ಲ.ಕಮರ್ಷಿಯಲ್ ಸಿಲಿಂಡರ್ ಕೊರತೆಯಿಂದ ಸಮಸ್ಯೆ ಎದುರಾಗಿದೆ.
ಧಾರವಾಡದಲ್ಲಿ ಕೋಚಿಂಗ್ ಸೇಂಟರ್‌ಗಳೇ ಹೆಚ್ಚಿವೆ. ಪ್ರತಿಯೊಬ್ಬರು ಪ್ರವೇಶದಲ್ಲಿ ಕಡಿತ ಮಾಡಿದ್ದಾರೆ. ಇನ್ನು ಕೆಲವು ಕೋಚಿಂಗ್ ಸೆಂಟರ್‌ಗಳು ಸಿಲಿಂಡರ್ ಸಮಸ್ಯೆಯಿಂದ ಬಂದ್ ಆಗುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಮರ್ಷಿಯಲ್ ಸಿಲಿಂಡರ್ ಸಮಸ್ಯೆ ಬಗೆಹರಿಸಬೇಕೆಂದು ಎಂದು ಟ್ಯುಟೋರಿಯಲ್ ಮ್ಯಾನೇಜರ್ ವಿನಾಯಕ ಜೋಶಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ HAL ಸಂಸ್ಥೆಯಲ್ಲಿ 2 ಹುದ್ದೆಗಳ ನೇಮಕಾತಿ.. ಕೂಡಲೇ ಅರ್ಜಿ ಸಲ್ಲಿಸಿ


















