ರಾಮನಗರ: ಯುದ್ದದ ಎಫೆಕ್ಟ್‌ನಿಂದ ದೇಶದಲ್ಲಿ ಸಿಲಿಂಡರ್‌ಗಳಿಗೆ ಅಭಾವ ಉಂಟಾದ ಹಿನ್ನೆಲೆ ಹೋಟೆಲ್ ಉದ್ಯಮಕ್ಕೂ ತೀವ್ರ ಹೊಡೆತ ಬಿದ್ದಿದೆ.
ಸಣ್ಣ ಸಣ್ಣ ಹೋಟಲ್‌ಗಳಿಗೂ ಸಿಲಿಂಡರ್ ಅಭಾವದ ಬಿಸಿ ತಟ್ಟಿದ್ದು, ಕಮರ್ಷಿಯಲ್ ಸಿಲಿಂಡರ್ ಸಿಗದ ಕಾರಣ ಹೋಟಲ್ ಮಾಲೀಕರು ಸೌದೆಒಲೆ ಮೊರೆ ಹೋಗಿದ್ದಾರೆ.
ರಾಮನಗರದ ದಾವಣಗೆರೆ ಬೆಣ್ಣೆ ದೋಸೆ ಹೋಟಲ್‌ಗೆ ಸಿಲಿಂಡರ್ ಅಭಾವದ ಹಿನ್ನಲೆ ಮಾಲೀಕರು ಹತ್ತು ದಿನಗಳ ಕಾಲ ಹೋಟೆಲ್ ಬಂದ್ ಮಾಡಿದ್ದರು. ಇದೀಗ ಬೇರೆ ವಿಧಿ ಇಲ್ಲದೇ ಹತ್ತು ಸಾವಿರ ಖರ್ಚು ಮಾಡಿ ಕಬ್ಬಿಣದ ಒಲೆ ನಿರ್ಮಾಣ ಮಾಡಿ, ಕಟ್ಟಿಗೆ ಬಳಸಿಕೊಂಡು ಇದೀಗ ದೋಸೆಗಳನ್ನ ತಯಾರಿಸುತ್ತಿದ್ದಾರೆ .
ಇದನ್ನೂ ಓದಿ : ಮೂಕಪ್ರಾಣಿಗಳಿಗೂ ಗ್ಯಾಸ್ ಟ್ರಬಲ್!


















